ಸ್ಪರ್ಧಾ ಯುಗದಲ್ಲಿ ಯುವಕರು ಜಾಗ್ರತರಾಗಲಿ
ನರಗುಂದ: ಆಧುನಿಕ ಯುಗದಲ್ಲಿ ಪ್ರತಿಯೊಂದಕ್ಕೂ ಸ್ಪರ್ಧೆ ಮಾಡಬೇಕಾಗಿದ್ದು, ಹಾಗಾಗಿ ಯುವಕರು ಜಾಗ್ರತರಾಗಬೇಕು ಎಂದು ಉಪನ್ಯಾಸಕ ಎಂ.ಎಸ್. ಯಾವಗಲ್ ಹೇಳಿದರು.
ಅವರು ಪಟ್ಟಣದ ದಂಡಿನ ಗುರಪ್ಪ ಮೆಮೋರಿಯಲ್ ಸಭಾಂಗಣದಲ್ಲಿ ಈಚೆಗೆ ಸ್ವಾಮಿ ವಿವೇಕಾನಂದರ ಜನ್ಮ ವರ್ಷಾಚರಣೆ ನಿಮಿತ್ತ ಜಿಲ್ಲಾ ಮಟ್ಟದ ಲಿಖಿತ ರಸಪ್ರಶ್ನೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಯುವಕರು ಸ್ಪರ್ಧಾತ್ಮಕ ಭಾವನೆ ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ರಸಪ್ರಶ್ನೆಯಲ್ಲಿ ಮೇಷಾ ಜೋಶಿ ಹಾಗೂ ವಿಜಯ ಬಡಿಗೇರ ಪ್ರಥಮ, ಪ್ರೇಮಾ ಪಟ್ಟಣಶೆಟ್ಟಿ ಹಾಗೂ ಸುಭಾನಲ್ಲಾ ನದಾಫ ದ್ವಿತೀಯ, ಅಭಿಷೇಕ ಮಠದ ಹಾಗೂ ಕೆ.ಎಸ್. ಅತ್ತಾರ ತೃತೀಯ ಸ್ಥಾನ ಪಡೆದರು. ಶ್ರೀನಿವಾಸ ಬೋನಗೇರ, ಡಾ. ಸಂತೋಷ ಯಾವಗಲ್, ಸಂಜು ನಲವಡೆ, ಮಂಜುನಾಥ ಪಲ್ಲೇದ, ವಿಶ್ವನಾಥ ದೇಶಪಾಂಡೆ, ನಂದೀಶ ಮಠದ, ಸಂಜೀವ ನಲವಡೆ, ಮಂಜು ಕವಡೆ, ಶಿವು ಬೂದಿಹಾಳ, ಅಕ್ಷಯ ಜೋಶಿ, ವಿನಾಯಕ ಬಾಳಿಕಾಯಿ, ಪವನ ಕರಿಕಟ್ಟಿ, ವಿನಾಯಕ ಗುಲಗಂಜಿ, ವಿಜಯ ಮುಧೋಳ, ನಿಂಗಪ್ಪ ನಾಯ್ಕರ, ಸಂಗನಗೌಡ ಪಾಟೀಲ, ದ್ಯಾಮಪ್ಪ, ಉಮೇಶ ಸುಬೇದಾರ, ಶರಣು ಪಾಟೀಲ, ಗೌರೀಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.