ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭೀಮಸೇನ ಜೋಶಿ ಸಂಗೀತದ ಸ್ಫೂರ್ತಿ ಸೆಲೆ

Vishwanath S
Updated On : 14 Feb 2014, 1:34 am

ಗದಗ: ಪಂ. ಭೀಮಸೇನ ಜೋಷಿಯವರು ಹಾಡುವುದನ್ನೇ ಕೇಳಿ ಬೆಳೆದವಳು ನಾನು. ಭೀಮಸೇನ ಜೋಶಿ ಅವರು ಸಂಗೀತ ಲೋಕದ ಸ್ಫೂರ್ತಿಯ ಸೆಲೆ ಎಂದು ಗಾಯಕಿ ಕೊಲ್ಕತ್ತಾದ ಅಂಜನಾ ನಾಥ ಹೇಳಿದರು.
ಕಲಾವಿಕಾಸ ಪರಿಷತ್‌ನಲ್ಲಿ ಈಚೆಗೆ ಕಲಾವಿಕಾಸ ಪರಿಷತ್‌ನಿಂದ ಆಯೋಜಿಸಿದ್ದ ಭಾರತ ರತ್ನ ಪಂ. ಭೀಮಸೇನ ಜೋಶಿಯವರ ಸ್ಮರಣೆಯಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಕಲಾವಿಕಾಸ ಉತ್ಸವ-2014ರ ಸಮಾರೋಪ ಸಮಾರಂಭದಲ್ಲಿ ಭಾರತರತ್ನ ಪಂ. ಭೀಮಸೇನ್ ಜೋಶಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಗದಗನಂತಹ ಸಣ್ಣ ನಗರದಲ್ಲಿ ಇಂಥ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡು ನನಗೆ ಕರೆದು ಗೌರವಿಸಿದ್ದಕ್ಕೆ ಸಂತೋಷವಾಗಿದೆ. ಈ ಉತ್ಸವ ಸಂಘಟಿಸಿದ ಕಲಾವಿಕಾಸ ಪರಿಷತ್‌ಗೆ ಮತ್ತು ಸಹಕಾರ ನೀಡಿದ ವಿದ್ಯಾದಾನ ಸಮಿತಿಗೆ ನಾನು ಆಭಾರಿಯಾಗಿದ್ದೇನೆ ಎಂದರು. ಸಿಕೆಎಚ್ ಶಾಸ್ತ್ರಿ ಮಾತನಾಡಿ, ಪಂ. ಭೀಮಸೇನ ಜೋಶಿಯವರು ನಮ್ಮ ನಗರಕ್ಕೆ ಭಾರತ ರತ್ನ ಗೌರವ ತಂದು ಕೊಟ್ಟಿದ್ದಾರೆ. ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ರೀತಿಯಲ್ಲಿ ಈ 3 ದಿನದ ಸಮ್ಮೇಳನದಲ್ಲಿ ಫಲಾಪೇಕ್ಷವಿಲ್ಲದೇ ಆಗಮಿಸಿ ತಮ್ಮ ಸಂಗೀತ ರಸದೌತಣ ಉಣಬಡಿಸಿದ ರಾಜ್ಯ, ಹೊರರಾಜ್ಯದ ಕಲಾವಿದರ ಸಹಕಾರವೇ ಸಮ್ಮೇಳನದ ಯಶಸ್ಸಿಗೆ ಕಾರಣವಾಗಿದೆ ಎಂದರು.
ವಿದ್ಯಾದಾನ ಸಮಿತಿ ಕಾರ್ಯದರ್ಶಿ ಧೀರೇಂದ್ರ ಹುಯಿಲಗೋಳ ಅವರು ಕೋಲ್ಕತ್ತಾದ ಅಂಜನಾ ನಾಥ, ಗೋವಾದ ಪಂ. ಯೋಗಿರಾಜ ನಾಯಕ್, ಧಾರವಾಡದ ಡಾ. ರವಿಕಿರಣ ನಾಕೋಡ ಮತ್ತು ಪವಿತ್ರ ಭಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಜಯಕುಮಾರ ಹಿರೇಮಠ, ಪ್ರಭುರಾಜಗೌಡ ಪಾಟೀಲ, ರಾಧಾಕೃಷ್ಣ ಬಿ.ವಿ., ಡಾ. ಸಂತೋಷ ತೋಟಗಂಟಿಮಠ ಮುಂತಾದವರು ಉಪಸ್ಥಿತರಿದ್ದರು. ಮಂಜರಿ ಹೊಂಬಾಳಿ ಪ್ರಾರ್ಥಿಸಿದರು. ದತ್ತಪ್ರಸನ್ನ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಸುಧೀಂದ್ರ ಹುಯಿಲಗೋಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement