ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೆಕ್ಕೆಜೋಳ ಖರೀದಿ ಪ್ರಾರಂಭಿಸಿ: ಪ್ರತಿಭಟನೆ

Vishwanath S
Updated On : 14 Feb 2014, 1:34 am

ಮುಂಡರಗಿ: ಸ್ಥಳೀಯ ಎಪಿಎಂಸಿ ಯಾರ್ಡ್‌ನಲ್ಲಿ ಮೆಕ್ಕೆಜೋಳ ಖರೀದಿ ಸ್ಥಗಿತಗೊಂಡಿದೆ. ಮಾರ್ಚ್ ಅಂತ್ಯದವರೆಗೆ ದಿನನಿತ್ಯ ಖರೀದಿ ಮಾಡಬೇಕು, ವಾರದ ಒಳಗೆ ರೈತರ ಖಾತೆಗೆ ಹಣ ಜಮಾ ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಅನೇಕ ರೈತರು ಗುರುವಾರ ತಹಸೀಲ್ ಕಚೇರಿ ಮುಂದಿನ ಕೆಲ ಸಮಯ ಗದಗ-ಮುಂಡರಗಿ ರಸ್ತೆ ಸಂಚಾರ ತಡೆ ಮಾಡಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಹತ್ತಿ ಬೆಳೆಯೂ ಹಾಳಾಗಿದ್ದರಿಂದ ರೈತರಿಗೆ ಪ್ರತಿ ಎಕರೆಗೆ ರು. 25 ಸಾವಿರ ಪರಿಹಾರ ಶೀಘ್ರವೇ ಕೊಡಬೇಕು. ಒಂದು ವೇಳೆ ಪರಿಹಾರ ವಿತರಣೆಯಲ್ಲಿ ವಿಳಂಬವಾದಲ್ಲಿ ಫೆ. 22, 23, 24ರಂದು ಹಾವೇರಿ ಜಿಲ್ಲೆ ಮೊಟೆಬೇನ್ನೂರಿನ ಹತ್ತಿರ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಬೃಹತ್ ಪ್ರಮಾಣದ ಹೋರಾಟ ಮಾಡುವುದಾಗಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕಬ್ಬಿಗೆ ಘೋಷಣೆ ಮಾಡಿದಂತೆ ಮೆಕ್ಕೆಜೋಳ ಬೆಳೆದ ರೈತರ ಖಾತೆಗೂ ಬೆಂಬಲದ ಹಣ ಹಾಕಬೇಕು. ಹಾಕದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು. ನಂತರ ತಹಸೀಲ್ದಾರ್ ಎಸ್.ಆರ್. ಶಿರಕೊಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನುದ್ದೇಶಿಸಿ ಮಾತನಾಡಿ ಮೆಕ್ಕೆಜೋಳ ಖರೀದಿಯಾದ ತಕ್ಷಣ ಹಣ ಖಾತೆಗೆ ಜಮಾ ಮಾಡಲಾಗುವುದು. ಬಾಕಿ ಇರುವ ಹಣವನ್ನು ವಾರದಲ್ಲಿ ಪಾವತಿಸಲಾಗುವುದು ಎಂದರು. ತಹಸೀಲ್ದಾರ್ ಭರವಸೆಯ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.
ಗದಗ ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಶಿವಾನಂದ ಇಟಗಿ, ಚಂದ್ರಕಾಂತ ಉಳ್ಳಾಗಡ್ಡಿ, ರಾಜ್ಯ ರೈತ ಸಂಘದ ಕಾರ್ಯದರ್ಶಿ ವಿಠ್ಠಲ ಗಣಾಚಾರಿ, ಚಂದ್ರಹಾಸ ಉಳ್ಳಾಗಡ್ಡಿ, ಎಸ್.ಎಸ್. ಪದಕಿ, ಮಂಜಪ್ಪ ಹುಯಿಲಗೋಳ, ಆರ್.ದಂಡಿನ, ಬಿ.ಡಿ. ಚೌಡಿ, ಯು.ಬಿ. ಹಿರೇಗೌಡ್ರ, ಚಂದ್ರಪ್ಪ ವಡ್ಡರ, ಸುರೇಶ ಇಟಗಿ, ಈರಪ್ಪ ಇಟಗಿ, ಸುಭಾಸ ಉಳ್ಳಾಗಡ್ಡಿ, ಸುರೇಶ ಹೊಸೂರು ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement