ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಡಿ ಹತೋಟಿಯಲ್ಲಿಡಲು ಕೇಂದ್ರ ಸರ್ಕಾರ ವಿಫಲ: ಸಿ.ಎಂ. ಉದಾಸಿ

Vishwanath S
Updated On : 15 Feb 2014, 12:29 pm

ಕನ್ನಡಪ್ರಭ ವಾರ್ತೆ, ಗದಗ, ಫೆ. 14
ಭಾರತದ ಗಡಿಯನ್ನು ಹತೋಟಿಯಲ್ಲಿಡಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ಅವರು ಶುಕ್ರವಾರ ನಗರದ ತೋಂಟದಾರ್ಯ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಂತರಿಕ ಮಟ್ಟದಲ್ಲಿ ಭಯೋತ್ಪಾದಕತೆ, ನಕ್ಸಲ್, ಗಡಿಯಲ್ಲಿ ನಿರಂತರ ಗುಂಡಿನ ಸುರಿಮಳೆ ಗೈಯ್ಯುವ ಪಾಕ್ ವಿರುದ್ಧ ದಿಟ್ಟ ಉತ್ತರ ನೀಡದೆ, ಚೀನಾ ದೇಶವು ಅತಿಕ್ರಮಣ ಹಿಮ್ಮೆಟ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದ ಅಭದ್ರತೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಪ್ರಮುಖ ಕಾರಣವಾಗಿದೆ. ದೇಶದ ಜನತೆಗೆ ಭವಿಷ್ಯದ ದೃಷ್ಟಿಯಿಂದ ಗಂಭೀರ ಚಿಂತನೆಯಾಗಿದೆ. ದೇಶಧ ಜನ ದಿನನಿತ್ಯ ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
10 ವರ್ಷಗಳ ನಿರಾಶಾದಾಯಕ ಆಡಳಿತದ ಅರ್ಥಿಕ ತಪ್ಪು ನಡುವಳಿಕೆಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಭಣವಾಗಿದೆ. ಬೆಲೆ ಏರಿಕೆ, ರುಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ. ಡಿಸೈಲ್, ಪೆಟ್ರೋಲ್, ಸೀಮೆಎಣ್ಣಿ, ಗ್ಯಾಸ್ ಏರಿಕೆಯ ಪರಿಣಾಮದಿಂದ ರೈತರು ಹಾಗೂ ಉದ್ಯಮಿ ಉತ್ಪಾದನೆಗಳ ಮೇಲೆ ವ್ಯತಿರಿಕ್ತ ಅರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ದೇಶಕ್ಕೆ ಸಮರ್ಥ ನಾಯಕನ ಅವಶ್ಯಕತೆಯಿದೆ. ಸೂಕ್ತ ಉತ್ತರ ನೀಡಲು ಮತ್ತು ಮುಂದಿನ 10 ವರ್ಷಗಳಲ್ಲಿ ಅಭಿವೃದ್ಧಿಶೀಲ ದೇಶವನ್ನಾಗಿಸಲು ಜನರು ನರೇಂದ್ರ ಮೋದಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ತಾವು ಬಿಜೆಪಿಗೆ ಮರಳಲು ಯಾವುದೇ ಸೂಕ್ತ ಅವಕಾಶ ಕೇಳಿಲ್ಲ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿಯಾಗುವುದು ಅಗತ್ಯವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement