ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶ್ರೀಮಂತರಿಗಾಗಿ ಶಿಕ್ಷಣ ನೀತಿ ಜಾರಿ

Vishwanath S
Updated On : 15 Feb 2014, 12:29 pm

ಗದಗ: ಶಿಕ್ಷಣ ಬಡವರ ಮಕ್ಕಳಿಗೆ ಕನಸಾಗಿದೆ. ಶ್ರೀಮಂತರಿಗೆ ಮಾತ್ರ ಶಿಕ್ಷಣ ಸಿಗುವಂತಹ ನೀತಿಗಳನ್ನು ಸರ್ಕಾರ ಜಾರಿ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅನಂತ ನಾಯಕ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಈಚೆಗೆ ಶಿಕ್ಷಣದ ವ್ಯಾಪಾರೀಕರಣ      ಖಾಸಗೀಕರಣ, ಕೇಸರೀಕರಣ, ಭ್ರಷ್ಟಾ ಚಾರ      ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎಫ್‌ಐ 3ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಬಡವರ, ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ವಂಚಿಸುತ್ತಿವೆ. ಸರ್ವರಿಗೂ ಸಮಾನದ ಗುಣಮಟ್ಟದ ಶಿಕ್ಷಣ ಸಿಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ತನ್ನ ಹುಟ್ಟಿನಿಂದಲೂ ಹಿಂದಿನವರೆಗೂ ಹೋರಾಟಗಳನ್ನು ಮಾಡುತ್ತಾ ಬಂದಿವೆ. ಆದರೆ, ನಮ್ಮನ್ನು ಆಳುತ್ತಿರುವ ಸರ್ಕಾರಗಳು ಶ್ರೀಮಂತರ, ಬಂಡವಾಳ ಶಾಹಿಗಳ ಪರವಾದ ನೀತಿಗಳನ್ನು ಜಾರಿ ಮಾಡುವ ಮೂಲಕ ಬಡವ ಮತ್ತು ಮಧ್ಯಮ ವರ್ಗದವರನ್ನು ವಂಚನೆ ಮಾಡುತ್ತಿವೆ. ಜನಪರ ಮತ್ತು ವಿದ್ಯಾರ್ಥಿಪರ ನೀತಿಗಳನ್ನು ಜಾರಿಗೊಳಿಸಬೇಕು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಸಮರ್ಪಕವಾಗಿ ಜಾರಿಯಾಗಬೇಕು. ಈ ಮೂಲಕ ಬಡವ ರೈತ ಕಾರ್ಮಿಕರ     ದಿನದಲಿತರ ಅಲ್ಪಸಂಖ್ಯಾತರ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು    ಒತ್ತಾಯಿಸಿದರು.
ಜಿಲ್ಲಾ ಸಮ್ಮೇಳನದ ಅಧ್ಯಕ್ಷ ಪೀರು ರಾಠೋಡ ಹಾಗೂ ಜಿಲ್ಲಾ ಉಪಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ಅಸಮಾನತೆಯು ಲಿಂಗತಾರತಮ್ಯ ಜಾತಿ ವ್ಯವಸ್ಥೆ ದೇಶದಲ್ಲಿ ಹೆಚ್ಚಾಗಿವೆ. ಇವುಗಳನ್ನು ತೊಲಗಿಸಲು ವಿದ್ಯಾರ್ಥಿ, ಯುವಕರು ಪಣ ತೊಡಬೇಕು ಎಂದರು. ಬಾಲಕೃಷ್ಣ ಜಾಡಬಂಡಿ, ಮಾನು ರಾಠೋಡ, ಶಿವು ಚವ್ಹಾಣ, ಬಾಲು ರಾಠೋಡ, ಶಿವಾನಂದ ಬೋಸ್ಲೆ, ಶಿವಾಜಿ ಗಡ್ಡದ, ಪ್ರಕಾಶ ಎಳವರ, ಸಕ್ರಪ್ಪ ಮಾಳೋತ್ತರ, ಜ್ಯೋತಿ ಲಕ್ಕಲಕಟ್ಟಿ, ರೇಷ್ಮಾ ಮುಲ್ಲಾ, ಧರ್ಮಪ್ಪ ಹಾದಿಮನಿ, ಅಶೋಕ ಉಕ್ಕಿಸಲ್, ಶಿವುಕುಮಾರ ಪೂಜಾರ, ಸಂತೋಷ ಮಾಳೊತ್ತರ, ಲೀಲಾವತಿ, ನೀಲವ್ವ ಹಡಪದ, ಪ್ರವೀಣ ಡೊಳ್ಳಿನ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಶರಣಯ್ಯ ಸುಗೀರಯ್ಯನಮಠ ಸ್ವಾಗತಿಸಿದರು. ಶಿವು ಚವ್ಹಾಣ ನಿರೂಪಿಸಿದರು. ಮಂಜುನಾಥ ರಾಠೋಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement