ಇಂದು ಸಾಹಿತ್ಯ ಉಪನ್ಯಾಸ ಕಾರ್ಯಕ್ರಮ
ಗದಗ: ತಾಲೂಕು ಕದಳಿ ವೇದಿಕೆ ಫೆ 16ರಂದು ಮಧ್ಯಾಹ್ನ 3ಕ್ಕೆ ಜೀವನ ಮತ್ತು ಸಾಹಿತ್ಯ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಕವಿತಾ ದಂಡಿನ ಅಧ್ಯಕ್ಷತೆ ವಹಿಸುವರು. ಜೀವನ ಮತ್ತು ಸಾಹಿತ್ಯ ಕುರಿತು ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ವಿ. ಬಡಿಗೇರ ಉಪನ್ಯಾಸ ನೀಡುವರು. ಶೋಭಾ ಪೊಲೀಸ್ಪಾಟೀಲ ಅವರ ಮನೆಯಲ್ಲಿ ಗೃಹಗೋಷ್ಠಿ ಕಾರ್ಯಕ್ರಮ ನಡೆಯಲಿದ್ದು, ಕದಳಿ ವೇದಿಕೆಯ ಸದಸ್ಯನಿಯರು ಸಾಹಿತ್ಯ ಆಸಕ್ತರು ಆಗಮಿಸಬೇಕು ಎಂದು ಕಾರ್ಯದರ್ಶಿ ಶ್ರೀದೇವಿ ಪಾಟೀಲ ಹಾಗೂ ಶೋಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಕೌನ್ಸೆಲಿಂಗ್
ಗದಗ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ರೂಂ ನಂ. 111, ಜಿಲ್ಲಾ ಆಡಳಿತ ಭವನದಲ್ಲಿ ಫೆ. 17ರ ಮಧ್ಯಾಹ್ನ 4ಕ್ಕೆ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಂದ ಪದವೀಧರೇತರ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಕೌನ್ಸೆಲಿಂಗ್ ಆಯೋಜಿಸಲಾಗಿದೆ. ಅರ್ಹ ಶಿಕ್ಷಕರು ತಪ್ಪದೇ ಕೌನ್ಸೆಲಿಂಗ್ಗೆ ಹಾಜರಾಗಬೇಕು ಎಂದು ಡಿಡಿಪಿಐ ಬಿ.ವಿ. ರಾಜೇಂದ್ರ ಪ್ರಸಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.