ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲೆಯಲ್ಲಿ ತುಘಲಕ್ ದರ್ಬಾರ್ ನಿಲ್ಲಲಿ

Mainashree
Updated On : 17 Feb 2014, 10:26 am

ಗದಗ:  ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯುದ್ದಕ್ಕೂ ತುಘಲಕ್ ದರ್ಬಾರ್ ಮಾದರಿಯ ಆಡಳಿತ ನಡೆಯುತ್ತಿದ್ದು, ಇದರಿಂದ ಕೆಲವೇ ತಿಂಗಳಲ್ಲಿ ಜನತೆ ರೋಸಿ ಹೋಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಸಚಿವ ಕಳಕಪ್ಪ ಬಂಡಿ ನೇರವಾಗಿ ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.
ಭಾನುವಾರ ಸಂಜೆ ಗದಗ ನಗರದಲ್ಲಿ ನಡೆದ ಭಾರತ ಗೆಲ್ಲಿಸಿ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಂಗ್ರೆಸ್ಸಿಗರು ನರೇಂದ್ರ ಮೋದಿಯ ಜನಪ್ರಿಯತೆಯಿಂದ ಕಂಗೆಟ್ಟಿದ್ದು ಮೋದಿ ಭಾವ ಚಿತ್ರವುಳ್ಳ ಫ್ಲೆಕ್ಸ್‌ಗಳನ್ನು ಹರಿದು ಹಾಕುವ ಮೂಲಕ ತಮ್ಮ ದುಷ್ಟ ಸಂಸ್ಕೃತಿ ಪ್ರದರ್ಶಿಸುತ್ತಿದ್ದಾರೆ. ಫ್ಲೆಕ್‌ಗಳನ್ನು ಹರಿದು ಹಾಕಬಹುದು, ಆದರೆ ಜನರ ಮನಸ್ಸಿನಲ್ಲಿ ತುಂಬಿರುವ ನರೇಂದ್ರ ಮೋದಿಯವರನ್ನು ಕಿತ್ತು ಹಾಕುವುದು ಸಾಧ್ಯವಿಲ್ಲ ಎನ್ನುವುದನ್ನು ಅರಿಯಬೇಕಿದೆ. ಫ್ಲೆಕ್ಸ್ ವಿಷಯದಲ್ಲಿ ನೀವು ಜಿಲ್ಲಾಡಳಿತವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ. ಇದು ಚುನಾವಣೆಯ ಸಂದರ್ಭವಲ್ಲ. ಅದ್ಯಾವ ಕಾರಣಕ್ಕೆ ಮೋದಿ ಅವರ ಫ್ಲೆಕ್ಸ್ ತೆಗೆಯಲು ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಜಿಲ್ಲೆಯಲ್ಲಿ ಡಿಎಸ್‌ಪಿ ಆಗಿ ಸೇವೆ ಸಲ್ಲಿಸುತ್ತಿರುವವರು ಸರ್ಕಾರಿ ಸೇವೆ ಮಾಡುವ ಬದಲು ರಾಜಕಾರಣ ಮಾಡಲು ಬಂದಂತೆ ತೋರುತ್ತಿದೆ. ನೀವು ರಾಜಕಾರಣ ಮಾಡುವುದಿದ್ದರೆ ಹುದ್ದೆಗೆ ರಾಜಿನಾಮೆ ನೀಡಿ ರಾಜಕಾರಣಕ್ಕೆ ಬನ್ನಿ. ನೀವು ಇಲ್ಲಿಗೆ ಬಂದಿರುವುದು ನೌಕರಿ ಮಾಡುವುದಕ್ಕೆ ಎನ್ನುವುದನ್ನು ಮರೆಯಬೇಡಿ. ಸರ್ಕಾರಿ ನೌಕರರು ಪಕ್ಷದ ಏಜೆಂಟ್‌ರಂತ ವರ್ತನೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಲಾಮಗಿರಿ ವ್ಯವಸ್ಥೆಗೆ ಶರಣಾಗಬೇಡಿ. ಜಿಲ್ಲೆಯಲ್ಲಿ ಮೌಲ್ಯಾಧಾರಿತ ರಾಜಕಾರಣ ಕುಸಿಯುತ್ತಿದೆ ಎನ್ನುವುದು ಕಳೆದ 6 ತಿಂಗಳಲ್ಲಿ ಜಿಲ್ಲೆಯ ಜನತೆಗೆ ತಿಳಿದು ಹೋಗಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಪುತ್ರರು ಸಂಬಂಧಿಕರು ಶಾಸಕರಂತೆ ವರ್ತಿಸುವತ್ತ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಎಚ್.ಕೆ.ಪಾಟೀಲ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಜಿಲ್ಲೆಯಲ್ಲಿ ಶಾಸಕರ ಸಂಬಂಧಿಗಳು ಅಧಿಕಾರ ನಡೆಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಪ್ರಮುಖ ಸ್ಥಾನವಿದೆ. ಆದರೆ, ಅವರ ಕುಟುಂಬದವರಿಗೆ ಅಲ್ಲ ಎನ್ನುವುದನ್ನು ಕಾಂಗ್ರೆಸ್ ನಾಯಕರು ಮನಗಾಣಬೇಕಿದೆ. ನಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಬ್ಯಾನರ್, ಫ್ಲೆಕ್ಸ್ ಹರಿಯುವ ಕೀಳು ಸಂಸ್ಕೃತಿ ನಡೆಸಲಿಲ್ಲ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇಕೆ ನಡೆಯುತ್ತಿದೆ?  ವಿಶಾಲ ಮನೋವೃತ್ತಿ ಬೆಳೆಸಿಕೊಳ್ಳಿ, ಕೀಳು ಮಟ್ಟದ ರಾಜಕಾರಣದಿಂದ ಹೊರಬನ್ನಿ ಎಂದು ಟೀಕಿಸಿದ್ದ ವಿಶೇಷವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement