ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರಿಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ

Mainashree
Updated On : 17 Feb 2014, 10:27 am

ಗಜೇಂದ್ರಗಡ: ಪಟ್ಟಣದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಉಲ್ಭಣಿಸುತ್ತಿರುವ ಕುಡಿವ ನೀರಿನ ಸಮಸ್ಯೆ ಹಿನ್ನೆಲೆಯಿಂದ ಸ್ಥಳೀಯ ಪುರಸಭೆ ಕಾರ್ಯಾಲಯದಲ್ಲಿ ತುರ್ತು ನಡೆದ ಸದಸ್ಯರ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೇಸಿಗೆ ಮುನ್ನವೆ ಈಗ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಜನರಿಂದ ಕೇಳಿ ಬಂದಿವೆ. ಇದರ ನಿವಾರಣೆಗೆ ಮೊದಲು ಕಾರ್ಯಾನ್ಮುಖರಾಗಿರಿ ಎಂದರು. ಮುಖ್ಯಾಧಿಕಾರಿ ಕೆ.ಐ. ನಾಗನೂರ ಅವರಿಂದ ಎಲ್ಲ ಬಡಾವಣೆ ನೀರು ಪೂರೈಕೆ ಸಮಗ್ರ ಮಾಹಿತಿ ಪಡೆದ ಶಾಸಕರು, ಕೆಟ್ಟು ಸ್ಥಗಿತ ಬೊರ್‌ವೆಲ್‌ಗಳ ದುರಸ್ತಿ ಜತೆ ಹೊಸ ಕೊಳವೆಬಾವಿ ಕೊರೆಯಿಸಲು ಜಿಲ್ಲಾಧಿಕಾರಿಗೆ ತಿಳಿಸುತ್ತೇನೆ. ಬೇಸಿಗೆ ಸಮೀಪಿಸುತ್ತಿರುವದರಿಂದ ಕುಡಿಯುವ ನೀರಿನ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರಾಜಕೀಯ ಬೆರಸದೇ ಹೆಚ್ಚು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು. ಪುರಸಭೆ ಅಧ್ಯಕ್ಷೆ ಕವಿತಾ ಜಾಳಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ವಿರೋಧ ಪಕ್ಷದ ನಾಯಕ ಶಿವರಾಜ ಘೋರ್ಪಡೆ, ಸ್ಥಾಯಿ ಸಮಿತಿಯ ಅಶೋಕ ವನ್ನಾಲ, ಸದಸ್ಯರಾದ ಪ್ರಭು ಚವಡಿ, ರವಿ ಕಲಾಲ, ಚಂದ್ರು ಚಳಗೇರಿ, ಶೇಖಪ್ಪ ಇಟಗಿ, ಶರಣಪ್ಪ ರೇವಡಿ, ವಿಜಯಕುಮಾರ ರಾಯಬಾಗಿ, ಶಾರದಾ ರಾಠೋಡ್, ಸುಜಾತಾ ಚುಂಚಾ, ವಿಜಯಲಕ್ಷ್ಮಿ ಚೆಟ್ಟರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement