ಪರಿಶ್ರಮದಿಂದ ಉತ್ತಮ ಶೈಕ್ಷಣಿಕ ಬದುಕು
ಗದಗ: ಪರಿಶ್ರಮದಿಂದ ಉತ್ತಮ ಶೈಕ್ಷಣಿಕ ಬದುಕು ಕಟ್ಟಿಕೊಳ್ಳುವಲ್ಲಿ ಸಾಧ್ಯ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಭಾನುವಾರ ಸಂಜೆ ಬೆಟಗೇರಿಯ ಬಾಸೆಲ್ ಮಿಶನ್ ಪ್ರೌಢಶಾಲೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಬೆಟಗೇರಿ ಘಟಕದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯದ ಪರೀಕ್ಷಾ ಮಾರ್ಗದರ್ಶಿ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಿಬಿರದಲ್ಲಿ ನಗರದ ಸಿ.ಎಸ್. ಪಾಟೀಲ ಪ್ರೌಢ ಶಾಲೆ, ಸರ್ಕಾರಿ ಪ್ರೌಢ ಶಾಲೆ ಲಿಂಗದಾಳ, ವಿಡಿಎಸ್‌ಟಿ ಪ್ರೌಢ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳಿಂದ 260ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎನ್.ಎಸ್. ಬಟ್ಟೂರ, ಎನ್.ವಿ. ಜೋಶಿ, ಬಳಿಗೇರ, ಎಸ್.ಬಿ. ಅಂಗಡಿ, ಎ.ವಿ. ಶಿವನಗೌಡ್ರ, ಎಸ್.ಐ. ದಿಂಡೂರ, ಶಾರದಾ, ಎ.ಎಸ್. ಮಾರಿಹಾರ, ಜಾಕೋಬ ಪರಿಣಿತ ಶಿಕ್ಷಕರಾಗಿ ತರಬೇತಿ ನೀಡಿದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಜ. ಬಸವಜಯ ಮೃತ್ಯುಂಜಯ ಶ್ರೀಗಳು ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಬಿ.ಎಸ್. ಮಾನೇದ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಕುಂದಗೋಳ, ಶಿವನಗೌಡ ಹುಚ್ಚನಗೌಡ್ರ, ಮಲ್ಲೇಶಪ್ಪ ರೊಟ್ಟಿ, ಐ.ಬಿ. ಮಣಕವಾಡ, ಬಸವಣ್ಣೆಪ್ಪ ಮಾವಿನಕಾಯಿ, ಅಂದಪ್ಪ ಮುಳ್ಳಾಳ, ಮಲ್ಲೇಶಪ್ಪ ಪಲ್ಲೇದ, ಮಹೇಶ ಮುಗಳಿ, ಈಶಪ್ಪ ಚಿಕ್ಕಳ್ಳವರ, ಮಂಜು ಲಕ್ಕುಂದಿ, ಬಸಪ್ಪ ಮಾನೇದ, ಐ.ಎಂ. ಮಾನೇದ, ಶಂಕರಗೌಡ ಪಾಟೀಲ, ನಾಗೇಶ ಮಾರನಬಸರಿ, ಸಂತೋಶ ಖಾನಾಪುರ, ಮಂಜು ಸಂಕನಗೌಡ್ರ ಮುಂತಾದವರು ಉಪಸ್ಥಿತರಿದ್ದರು. ಕಲ್ಯಾಣಪ್ಪ ಹೋಳಿ ಅಧ್ಯಕ್ಷತೆ ವಹಿಸಿದ್ದರು. ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ, ಎಂ.ಎಸ್. ಮಲ್ಲಾಪುರ, ಕಾರ್ಯದರ್ಶಿ ಮಹೇಶ ಕರಿಬಿಷ್ಠಿ, ಎಂ.ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ರುಬಿನಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಿ.ಎಂ. ಮಾರನಬಸರಿ ಸ್ವಾಗತಿಸಿದರು. ರವಿ ಚಿಕ್ಕಣ್ಣವರ ನಿರೂಪಿಸಿದರು. ಎಸ್.ಎನ್. ಆದಿ ವಂದಿಸಿದರು.