ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

22ರಂದು ಕನಕದಾಸ ಪುತ್ಥಳಿ ಅನಾವರಣ

Vishwanath S
Updated On : 19 Feb 2014, 10:58 am

ಗದಗ: ಸ್ಥಳೀಯ ಕನಕಭವನ ಆವರಣದಲ್ಲಿ ಫೆ. 22ರಂದು ಮಧ್ಯಾಹ್ನ 3ಕ್ಕೆ ವಿಶ್ವಮಾನವ ಕನಕದಾಸರ ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಲಿದ್ದಾರೆ ಎಂದು ಗದಗ ತಾಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಿ. ತಳಗೇರಿ ಹೇಳಿದರು.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರು. 25 ಲಕ್ಷ ಅನುದಾನ ಹಾಗೂ ಗದಗ-ಬೆಟಗೇರಿ ನಗರ ಸಭೆಯ ರು. 5 ಲಕ್ಷ ಅನುದಾನದಲ್ಲಿ 8 ಅಡಿ ಎತ್ತರದ ಸುಂದರ ಕಂಚಿನ ಪ್ರತಿಮೆ ತಯಾರಿಸಲಾಗಿದ್ದು, ಅಂದು ಜರುಗುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಲೋಕೋಪಯೋಗಿ ಸಚಿವ ಎಸ್.ಸಿ. ಮಹಾದೇವಪ್ಪ, ಅಬಕಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಸಮಾಜಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ, ಜಿಲ್ಲೆಯ ಶಾಸಕ ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಮಾಜಿ ಸಚಿವ ಕಳಕಪ್ಪ ಬಂಡಿ, ಎಚ್.ಎಂ. ರೇವಣ್ಣ, ಸಂಸದ ಎಚ್. ವಿಶ್ವನಾಥ, ಮಾಜಿ ಶಾಸಕ ಡಿ.ಆರ್. ಪಾಟೀಲ, ಎಸ್.ಎನ್.ಪಾಟೀಲ, ಜಿ.ಎಸ್. ಗಡ್ಡದೇವರಮಠ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ 3 ಕೆಜಿ ಬೆಳ್ಳಿಯ ಕನಕದಾಸರ ಪ್ರತಿಮೆ ನೀಡಿ ಸನ್ಮಾನಿಸಲಾಗುವುದು. ಧಾರವಾಡ ಕೃಷಿ ವಿವಿ ಕುಲಪತಿ ಡಾ. ಬಿರಾದಾರ, ಡಾ. ಎಚ್.ಬಿ. ವಾಲಿಕಾರ, ಮೂರ್ತಿಶಿಲ್ಪಿ ಮಾಡಂಲಿಕರ, ಲೋಕೋಪಯೋಗಿ ಇಲಾಖೆ ಅಭಿಯಂತರ ಸಿ.ಆರ್. ಬಳ್ಳಾರಿ ಮುಂತಾದವರನ್ನು ಸನ್ಮಾನಿಸಲಾಗುವುದು. ಸಂಜೆ 4ಕ್ಕೆ ನಗರಸಭೆ ಎದುರಿನ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಮುಖ್ಯಮಂತ್ರಿಯನ್ನು ಮುನ್ಸಿಪಲ್ ಪ್ರೌಢಶಾಲೆ ಮೈದಾನದ ವರೆಗೆ ಮೆರವಣಿಗೆ ಮೂಲಕ ಸಾರ್ವಜನಿಕ ಸಮಾರಂಭಕ್ಕೆ ಕರೆದೊಯ್ಯಲಾಗುವುದು. ಈ ಕಾರ್ಯಕ್ರಮದಲ್ಲಿ ಸುಮಾರು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ರವಿ ದಂಡಿನ, ವಿ.ವೈ. ಮಕ್ಕಣ್ಣವರ, ವೈ.ಡಿ. ಜಡದಲಿ, ಹಾಲಪ್ಪ ಹರ್ತಿ, ಶಿವಣ್ಣ ಶಿಂಗಟಾಲಕೇರಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement