ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗೋವಿನ ಜೋಳ ಸಾಗಣೆ ವಿಳಂಬ: ರಸ್ತೆತಡೆ

Vishwanath S
Updated On : 19 Feb 2014, 10:58 am

ನರಗುಂದ: ಪಟ್ಟಣದ ಎಪಿಎಂಸಿಯಲ್ಲಿ ಆವರಣದಲ್ಲಿ 60 ಸಾವಿರ ಚೀಲ ಗೋವಿನಳ ಜೋಳ ಸಂಗ್ರಹಿಸಿದ್ದು, ಅವುಗಳನ್ನು ಗೋದಾಮುಗಳಿಗೆ ಸಾಗಿಸುವಲ್ಲಿ ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಮಂಗಳವಾರ ಗೋದಾಮುಗಳಿಗೆ ಹೋಗುವ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ನರಗುಂದ, ಚಿಕ್ಕನರಗುಂದ, ಕೊಣ್ಣೂರ, ಶಿರೋಳ ಸೇರಿದಂತೆ 4 ಕಡೆ ಗೋವಿನ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿದೆ. ಆದರೆ, ಇನ್ನುಳಿದ ಗ್ರಾಮಗಳಲ್ಲಿ ಖರೀದಿಸಿದ ಗೋವಿನಜೋಳವನ್ನು ಸಾಗಾಟ ಮಾಡಲಾಗಿದೆ. ಆದರೆ, ನರಗುಂದದಲ್ಲಿ ಖರೀದಿಸಿದವುಗಳನ್ನು ಮಾತ್ರ ಸಾಗಾಟ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ ರೈತರು, ಪಟ್ಟಣದ ಎಪಿಎಂಸಿಯಲ್ಲಿ ತೂಕವಾಗಿರುವ ಗೋವಿನ ಜೋಳ ಸಾಗಾಣಿಕೆ ಆಗುವವರೆಗೂ ಬೇರೆ ಗ್ರಾಮಗಳಲ್ಲಿನ ಲಾರಿಗಳು ಸಾಗಾಟ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಕೂಡಲೇ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ನಂತರ ರೈತರು ರಸ್ತೆ ತಡೆ ಹಿಂದಕ್ಕೆ ಪಡೆದರು. ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜ ಸಾಬಳೆ, ಮೌಲಸಾಬ್ ರಾಜಖಾನ, ಬಸಪ್ಪ ಯಲಿಗಾರ, ಮಹಾದೇವಪ್ಪ ಈಟಿ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement