ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೇತನ ವಿತರಣೆ ವಿಳಂಬ: ಪ್ರತಿಭಟನೆ

Vishwanath S
Updated On : 19 Feb 2014, 10:59 am

ಗಜೇಂದ್ರಗಡ: ಪಟ್ಟಣದ ಅಂಚೆ ಕಚೇರಿ ಸಿಬ್ಬಂದಿಗಳು ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನಗಳ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಫಲಾನುಭವಿಗಳು ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗಜೇಂದ್ರಗಡ ಹಾಗೂ ಸುತ್ತಲಿನ ಗ್ರಾಮಗಳ ವಿಧವಾ, ಅಂಗವಿಕಲ ಹಾಗೂ ವೃದ್ಧಾಪ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಸರ್ಕಾರ ಇಲ್ಲಿನ ಅಂಚೆ ಕಚೇರಿಗೆ ಹಣ ಮಂಜೂರು ಮಾಡಿದೆ. ಅಂಚೆ ಕಚೇರಿ ಸಿಬ್ಬಂದಿ ಪ್ರತಿ ತಿಂಗಳು ಸರಿಯಾಗಿ ವಿತರಿಸದೆ ಫಲಾನುಭವಿಗಳು ಸತಾಯಿಸುತ್ತಿದ್ದಾರೆ. ಇದರಿಂದ ಕಚೇರಿಗೆ ಪದೇ ಪದೇ ಅಲೆದು ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ದೂರಿದರು.
ಗಜೇಂದ್ರಗಡ, ಕುಂಟೋಜಿ, ಕೊಡಗಾನೂರ, ರಾಜೂರ, ಕಾಲಕಾಲೇಶ್ವರ, ಗೋಗೇರಿ, ನಾಗರಸಕೊಪ್ಪ, ಮ್ಯಾಕಲಝರಿ, ರಾಮಪುರ, ಹೊಸರಾಮಪುರ, ನಿಡಗುಂದಿ ಸೇರಿದಂತೆ ಅನೇಕ ಗ್ರಾಮಗಳ ಮಾಸಾಶನ ಫಲಾನುಭವಿಗಳು ವೇತನ ಪಡೆಯಲು ದುಬಾರಿ ಮೊತ್ತದ ಸಾರಿಗೆ ದರ ನೀಡಿ ಗಜೇಂದ್ರಗಡ ಅಂಚೆ ಕಚೇರಿಗೆ ಬಂದು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಬಡವರಿಗೆ ನೀಡುವ ಗೌರವಧನ ನೀಡುವಲ್ಲಿ ವಿಳಂಬ ನೀತಿ ಅನುಸರಿಸಬಾರದೆಂಬ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಕೆಯಿಂದಾಗಿ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುತ್ತವೆ. ಕೂಡಲೇ ಮಾಸಾಶನ ನೀಡದಿದ್ದರೆ ಅಂಚೆ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಪಟ್ಟು ಹಿಡಿದರು. ಕೂಡಲೇ ಎಚ್ಚೆತ್ತ ಅಂಚೆ ಕಚೇರಿ ಸಿಬ್ಬಂದಿ ಫಲಾನುಭವಿಗಳಿಗೆ ಮಾಸಾಶನ ನೀಡಲು ಮುಂದಾದರು.
ಬಳಿಕ ಕಚೇರಿ ಅಧಿಕಾರಿ ಎಸ್.ಕೆ. ಕುಲಕರ್ಣಿ ಮಾತನಾಡಿ, ಸರ್ಕಾರದಿಂದ ಬಿಡುಗಡೆಯಾದ ಮಾಸಾಶನ ವಿತರಣೆಯಲ್ಲಿ ವಿಳಂಬವಾಗಿರುವುದಕ್ಕೆ ಸಿಬ್ಬಂದಿ ಕೊರತೆ ಕಾರಣವಾಗಿದೆ. ಎರಡು ದಿನದಿಂದ ಅಂಚೆ ಇಲಾಖೆ ಸಿಬ್ಬಂದಿ ಮುಷ್ಕರ ವಿತರಣೆಗೆ ತುಸು ತೊಂದರೆಯಾಗಿದೆ ಎಂದರು. ಯಲ್ಲಪ್ಪ ಗಾಡಗೋಳಿ, ಹನುಮಂತ ಲಕ್ಕಲಕಟ್ಟಿ, ಹನುಮವ್ವ ಭಜಂತ್ರಿ, ಯಲ್ಲವ್ವ ಲಕ್ಕಲಕಟ್ಟಿ, ಹೂವಕ್ಕ ಕಲಾಲ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement