ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೇಡಿಕೆ ಈಡೇರಿಸಿ: ಡಿಸಿಗೆ ಮನವಿ

Vishwanath S
Updated On : 20 Feb 2014, 10:52 am

ಗದಗ: ಜಿಡಿಎಸ್ ನೌಕರರನ್ನು ಪೌರನೌಕರ ಎಂದು ಪರಿಗಣಿಸುವುದು ಹಾಗೂ ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿಕೊಳ್ಳುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬುಧವಾರ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಡಿಎಸ್ ನೌಕರರನ್ನು ಪೌರನೌಕರ ಎಂದು ಪರಿಗಣಿಸಿ, ಇಲಾಖೆಯ ನೌಕರರಿಗೆ ಕೊಡುವ ಎಲ್ಲಾ ಸೌಲಭ್ಯ ಕೊಡುವುದು. ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿಕೊಳ್ಳುವುದು. ಅನುಕಂಪದ ಆಧಾರದ ನೌಕರಿಯ ಸೌಲಭ್ಯ ಶೇ. 100ರಷ್ಟು ಕೊಡುವದು. ಪೋಸ್ಟ್‌ಮನ್ ಮತ್ತು ಎಂಟಿಎಸ್ ಶೇ. 25ರಷ್ಟು ಹುದ್ದೆಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ಕೊಡುವುದು. ಹೊರಗುತ್ತಿಗೆ ಆಧಾರದ ಮೇಲೆ ಶೇ. 25ರಷ್ಟು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಜಿಡಿಎಸ್ ನೌಕರರನ್ನು ತುಂಬುವುದು. ಶೇ. 50ರಷ್ಟು ಡಿಎ ಮರ್ಜ ಮಾಡುವುದು. 1-1-2006ರಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ, ಕಾಂಡಿಜೆಂಡಿ, ಪಾರ್ಟ್‌ಟೈಂ ನೌಕರರಿಗೆ ಡಿ.ಎ. ಕೊಡುವುದು ಸೇರಿಂದತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಲಾಗಿದೆ.
ಸಂಘದ ಅಧ್ಯಕ್ಷ ಕೆ.ಎಸ್. ಬ್ಯಾಳಿ, ಕಾರ್ಯಾಧ್ಯಕ್ಷ ರಾಜು ಪಾಟೀಲ, ಕಾರ್ಯದರ್ಶಿ ಎಂ.ಎನ್. ಕುರಹಟ್ಟಿ, ಎಲ್.ಎಂ. ಕುಂಬಾರ, ಎಂ.ಎಂ. ತಳವಾರ, ಜಿ.ಆರ್. ಕುಂಬಾರ, ಎಂ.ಆರ್. ಭಜಂತ್ರಿ, ಎ.ವಿ. ಗೋಡೆಕಾರ, ಆರ್.ವೈ. ಮಾಂಡ್ರೆ, ಡಿ.ಜಿ. ಭಜಂತ್ರಿ, ರವಿ ಕೃಜ್, ವೈ.ಎಸ್.  ದಾಮೋದರ, ಕೆ.ಎನ್. ತೋಟಗಂಟಿ, ಜಿ.ಎಫ್. ಹಡಪದ, ಬಿ.ಡಿ. ಶಾಲದಾರ, ಆರ್.ಎಲ್. ಗುಡಿ, ಎಚ್.ಎಂ. ಹುದ್ದಾರ, ಸಿ.ಸಿ. ಕಟ್ಟಿಮನಿ, ಎಸ್.ವಿ. ಜಿರನಹಳ್ಳಿ, ಪಿ.ಸಿ. ಅರಸಿದ್ಧಿ, ಎಸ್.ವಿ. ಮಡಿವಾಳರ, ಬಿ.ಎಚ್. ಪೂಜಾರ, ಡಿ.ಎಚ್. ಕಡೇಮನಿ, ಸುರೇಶ ಕುಲಕರ್ಣಿ, ವಾಣಿ ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement