ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳ ಪ್ರಗತಿಗೆ ಪಾಲಕರ ಸಹಕಾರ ಅಗತ್ಯ

Vishwanath S
Updated On : 20 Feb 2014, 10:51 am

ನರೇಗಲ್ಲ: ಮಕ್ಕಳಿಗೆ ಶಿಕ್ಷಕರ ಪಾಠ ಬೋಧನೆಯೊಂದೇ ಸಾಲದು ಪಾಲಕರು ಸಹ ಆತ್ಮ ನಿವೇದನೆಯಿಂದ ಸಹಕರಿಸಿದಲ್ಲಿ ತಮ್ಮ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಎಸ್‌ಎ ಪಪೂ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರನಾಥ ದೊಡ್ಡಮೇಟಿ ಹೇಳಿದರು.
ಸ್ಥಳೀಯ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದರು. ಮಕ್ಕಳ ಕಲಿಕೆ ಬಗ್ಗೆ ಉಪನ್ಯಾಸಕರಲ್ಲಿ ಪರಾಮರ್ಶಿಸಿಕೊಳ್ಳುವುದರಿಂದ ಮುಂಬರುವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ. ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಶೇ. 86ರಷ್ಟು ಅಂಕಗಳನ್ನು ಪಡೆದು ರಾಜ್ಯವೇ ನಮ್ಮತ್ತ ನೋಡುವಂತೆ ಮಾಡಿರುವುದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಮುಂದಿನ ಶೈಕ್ಷಣಿಕ ಪರೀಕ್ಷೆಯಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯುವಂತೆ ನಾವು ನೀವೆಲ್ಲ ಪ್ರೋತ್ಸಾಹಿಸೋಣ ಎಂದರು.ಎಸ್‌ಎವಿಪಿ ಸಮಿತಿ ಸದಸ್ಯ ಡಾ. ಜಿ.ಕೆ. ಕಾಳೆ, ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ, ಪ್ರಗತಿ ಹಾಗೂ ಪರೀಕ್ಷೆಯ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ಪಾಲಕರು ಮತ್ತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಎಂ.ಎಸ್. ದಡೇಸೂರಮಠ, ದೇಸಾಯಿಪಟ್ಟ, ಸಜ್ಜನ, ಬೂದಿಹಾಳ, ಕಿನ್ನಾಳ ಮುಂತಾದವರು ಉಪಸ್ಥಿತರಿದ್ದರು. ಎಫ್.ಎನ್. ಹುಡೇದ ಸ್ವಾಗತಿಸಿದರು. ಉಪನ್ಯಾಸಕ ಹೊನ್ನೂರ ನಿರೂಪಿಸಿದರು. ಪಿ.ವೈ. ಕರಮುಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement