ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸದೃಢ ದೇಹ, ಮನಸ್ಸು ಕಟ್ಟುವ ಕೆಲಸವಾಗಲಿ

Vishwanath S
Updated On : 20 Feb 2014, 10:51 am

ಗದಗ: ಕ್ರೀಡೆಗಳಿಂದ ಸದೃಢವಾದ ದೇಹ ನಿರ್ಮಾಣಗೊಳ್ಳುತ್ತದೆ. ಸದೃಢವಾದ ದೇಹಕ್ಕೆ ಸದೃಢವಾದ ಮನಸ್ಸು ಕಟ್ಟುವ ಕೆಲಸವಾಗಬೇಕಿದೆ ಎಂದು ನಿವೃತ್ತ ಐಜಿಪಿ ಹಾಗೂ ಸರ್ವಜನ ಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ಅವರು ಭಾನುವಾರ ಬೆಟಗೇರಿಯ ಎಚ್‌ಸಿಇಎಸ್ ಹೆಣ್ಣು ಮಕ್ಕಳ ಶಾಲಾ ಮೈದಾನದಲ್ಲಿ ಡಾ. ಶಂಕರ ಬಿದರಿ ಅಭಿಮಾನಿ ಬಳಗದ ನೇತೃತ್ವದಲ್ಲಿ 1 ತಿಂಗಳವರೆಗೆ ನಡೆಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಇಂದು ನಾಡಿನ ತುಂಬೆಲ್ಲ ಜಾತಿ, ಭಾಷೆಗಳನ್ನು ಆಧಾರವಾಗಿಟ್ಟುಕೊಂಡು ಕೂಡಿದ ಮನಸ್ಸುಗಳನ್ನು ಒಡೆದ ರಾಜಕಾರಣ ಮಾಡಲು ಎಲ್ಲ ರಾಜಕೀಯ ಪಕ್ಷಗಳು ಹೊರಟಿವೆ. ಆದರೆ, ನಾವು ಸರ್ವ ಜಾತಿ, ಭಾಷಿಕರ ಜನರನ್ನು ಒಂದುಗೂಡಿಸುವ ಕಾರ್ಯಮಾಡುತ್ತೇವೆ. ಅದಕ್ಕೆ ಎಂತಹ ದುಷ್ಟಶಕ್ತಿಗಳು ಬಂದರೂ ಅದು ನಿಲ್ಲುವುದಿಲ್ಲ. ಇಂದಲ್ಲ ನಾಳೆ ಅದಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಟಗೇರಿ ಗಣೇಶ ನಗರದ ಜಿ.ಎನ್.ಸಿ.ಸಿ. ತಂಡ ಪ್ರಥಮ ಹಾಗೂ ಶಂಕರ ಬಿದರಿ ಕ್ರಿಕೆಟ್ ಕ್ಲಬ್ ದ್ವಿತೀಯ ಸ್ಥಾನ ಪಡೆದುಕೊಂಡವು. ವಿಜೇತ ಕ್ರಿಕೆಟ್ ತಂಡಕ್ಕೆ ಶಂಕರ ಬಿದರಿ ಬಹುಮಾನ ವಿತರಿಸಿದರು. ಅಧ್ಯಕ್ಷತೆ ವಹಿಸಿದ್ದ ಹುಲ್ಲೇಶ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಎನ್. ಗುಜಮಾಗಡಿ ಸ್ವಾಗತಿಸಿ, ನಿರೂಪಿಸಿದರು. ಮಹೇಶ ಭಜಂತ್ರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement