ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದಿನಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ

Vishwanath S
Updated On : 22 Feb 2014, 10:52 am

ರೋಣ: ರೋಣದಲ್ಲಿ ಫೆ. 22, 23ರಂದು ನಡೆಯುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದಿಷ್ಟು ಹೊಸತನಗಳನ್ನು ಉಣ ಬಡಿಸಲು ಜಿಲ್ಲಾ ಕಸಾಪ, ಸಮ್ಮೇಳನದ ಸ್ವಾಗತ ಸಮಿತಿ ಸಿದ್ಧಗೊಂಡಿದೆ.
ವಿನೂತನ ಗೋಷ್ಠಿಗಳು: ಸಾಮಾನ್ಯವಾಗಿ ಸಮ್ಮೇಳನದಲ್ಲಿರುವ ಗೋಷ್ಠಿಗಳಿಗಿಂತ ಸ್ವಲ್ಪ ಭಿನ್ನವಾಗಿ ಹೊಸತನ ಹುಟ್ಟು ಹಾಕುವಲ್ಲಿ ದುರ್ಗಸಿಂಹ ಮಹಾಮಂಟಪ ಸಿದ್ಧಗೊಂಡಿದೆ. ಮಹಿಳಾ ಸಂವೇದನೆ ಕುರಿತಾದ ಪ್ರಾಯೋಗಿಕ ಚಿಂತನಾ ಗೋಷ್ಠಿ ಜರುಗಲಿದೆ. ಸಾಹಿತಿ ಹೇಮಲತಾ ವಸ್ತ್ರದ, ಪ್ರಾಧ್ಯಾಪಕಿ ಡಾ. ಲಕ್ಷ್ಮೀದೇವಿ ಲೆಂಕೆಣ್ಣವರ, ಗದಗ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ ಅವರು ಮಹಿಳೆಯ ಸಮಸ್ಯೆಗಳ ಕುರಿತು ವಿಷಯ ಮಂಡಿಸಲಿದ್ದಾರೆ.
ಮಕ್ಕಳ ಕಾವ್ಯ ವಿಹಾರ ಎಂಬ ಚಿಂತನಾ ಗೋಷ್ಠಿಯು ಮಕ್ಕಳಿಂದ ಜರುಗುವುದು ಮತ್ತೊಂದು ವಿಶೇಷ. ಸ್ಥಳೀಯ ಸಾಹಿತಿ, ಯುವ ಸಾಹಿತಿಗೆ ಕಾವ್ಯ ವಿಹಾರ ಗೋಷ್ಠಿ ಜರುಗಲಿದೆ. ಇನ್ನೂ ಅನೇಕ ನವ ನವೀನ ಗೋಷ್ಠಿ, ರಾಜ್ಯ ಹಾಗೂ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದ ಪ್ರಖ್ಯಾತ ಕಲಾ ತಂಡಗಳಿಂದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಸಮ್ಮೇಳನದ ಆಕರ್ಷಣೆ. ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನ    ನಡೆಯಲಿದೆ.
ಎಲ್ಲೆಡೆ ಧ್ವಜ, ಫ್ಲೆಕ್ಸ್: ಸಮ್ಮೇಳನಕ್ಕಾಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳು ಶೃಂಗಾರಗೊಂಡಿವೆ. ಮನೆಯ ಮುಂದೆ ರಂಗೋಲಿ ಚಿತ್ತಾರ ಮೂಡಿದೆ. ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಸಮ್ಮೇಳನಕ್ಕೆ ಸ್ವಾಗತ ಕೋರುವ ಫ್ಲೆಕ್ಸ್, ಕನ್ನಡ ಬಾವುಟಗಳು ಹಾರಾಡುತ್ತಿವೆ. ಪಟ್ಟಣದ ರಸ್ತೆ, ಗಟಾರುಗಳು ಸ್ವಚ್ಛಗೊಳಿಸಲಾಗಿದೆ.
ಪೊಲೀಸ್ ಬಂದೋಬಸ್ತ್: ಸುಗಮ ರಸ್ತೆ ಸಂಚಾರ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಗಾಗಿ ಪಟ್ಟಣದಲ್ಲಿ ಶುಕ್ರವಾರದಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪಟ್ಟಣದಲ್ಲಿ ಓರ್ವ ಹೆಚ್ಚುವರಿ ಎಸ್ಪಿ, ಡಿಎಸ್ಪಿ, 10 ಸಿಪಿಐ, 16 ಪಿಎಸ್ಐ, 24 ಎಎಸ್ಐ, 270 ಪೊಲೀಸ್ ಪೇದೆ, 26 ಮಹಿಳಾ ಪೇದೆ, 5 ಡಿಆರ್, 1 ಕೆಎಸ್ಆರ್ಪಿ ತುಕುಡಿ ನೇಮಿಸಲಾಗಿದೆ.
ಸಮ್ಮೇಳನದ ಊಟ...
ಸಮ್ಮೇಳನಕ್ಕೆ ಆಗಮಿಸುವವರಿಗೆ ವಿವಿಧ ರೀತಿಯ ಖಾದ್ಯ, ರೊಟ್ಟಿ, ಚಪಾತಿ, ಗೋದಿ ಸಿಹಿ ಹುಗ್ಗಿ ಊಟ ತಯಾರಿಸಲಾಗಿದೆ. ಇದಕ್ಕಾಗಿ 1 ಲಕ್ಷ ರೊಟ್ಟಿ, 50 ಸಾವಿರ ಚಪಾತಿ, 22 ಸಾವಿರ ಶೇಂಗಾ ಹೋಳಿಗೆ, 50 ಕೆಜಿ ಶೇಂಗಾ ಚಟ್ನಿ, 50 ಕೆಜಿ, ಗುರೆಳ್ಳು ಚಟ್ನಿ, 66 ಕೆಜಿ ಕಡಲೆ ಚಟ್ನಿ ಸಿದ್ಧಪಡಿಸಲಾಗಿದೆ. ಊಟದ ವ್ಯವಸ್ಥೆಗೆ 30 ಕೌಂಟರ್ ತೆರೆಯಲಾಗಿದ್ದು, ಬೆಳಗ್ಗೆ ಉಪಾಹಾರಕ್ಕಾಗಿ ಉಪ್ಪಿಟ್ಟು, ಶಿರಾ ಸಿದ್ಧ ಮಾಡಲಾಗುತ್ತಿದೆ.


-ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement