ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಂದು

Vishwanath S
Updated On : 22 Feb 2014, 10:52 am

ಕನ್ನಡಪ್ರಭ ವಾರ್ತೆ, ರೋಣ, ಫೆ. 21
ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ರೋಣ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಫೆ. 22 ಮತ್ತು 23ರಂದು ನಡೆಯಲಿದೆ. ಜನಪದ ತಜ್ಞ, ಸಾಹಿತಿ ಡಾ. ಸೋಮಶೇಖರ ಇಮ್ರಾಪುರ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಿಲಿದ್ದಾರೆ.
ಫೆ. 22ರಂದು ಬೆಳಗ್ಗೆ 8ಕ್ಕೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಅವರಿಂದ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಪರಿಷತ್ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ, ಕನ್ನಡ ಧ್ವಜಾರೋಹಣವನ್ನು ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ ನೆರವೇರಿಸುವರು. ಪುರಸಭೆ ಉಪಾಧ್ಯಕ್ಷೆ ಲಕ್ಷ್ಮಿ ಗಡಗಿ, ಸಲಹಾ ಮಂಡಳಿ ಸದಸ್ಯ ಚಂದ್ರಶೇಖರ ಸುಂಕದ, ಚಂಬಣ್ಣ ಸವಡಿ, ಬಸವರಾಜ ನವಲಗುಂದ ಉಪಸ್ಥಿತರಿರುವರು. ಬೆಳಗ್ಗೆ 11ಕ್ಕೆ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನ ಸರ್ವಾಧ್ಯಕ್ಷ ಡಾ. ಸೋಮಶೇಖರ ಇಮ್ರಾಪುರ ಮೆರವಣಿಗೆಯು ಪಟ್ಟಣದ ಎಸ್.ಆರ್. ಪಾಟೀಲ ಮಾದರಿ ಕೇಂದ್ರ ಶಾಲೆಯಿಂದ ಪ್ರಾರಂಭಗೊಂಡು ಸೂಡಿ ವೃತ್ತ, ಮುಲ್ಲಾನಬಾವಿ ವೃತ್ತ, ಬಸ್ ನಿಲ್ಲಾಣ ರಸ್ತೆ ಮೂಲಕ ಸಮ್ಮೇಳನದ ವೇದಿಕೆಗೆ ಆಗಮಿಸಲಿದೆ. ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಈ ವೇಳೆ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ, ಜಿಪಂ ಸದಸ್ಯ ಡಾ.  ಆರ್.ಬಿ. ಬಸವರಡ್ಡೇರ, ಶಕುಂತಲಾ ಗಾಣಿಗೇರ, ಬಸಲರಾಜೇಶ್ವರಿ ಪಾಟೀಲ, ಶಾರದಾ ಹಿರೇಗೌಡ್ರ, ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ಉಪಾಧ್ಯಕ್ಷೆ ಶೈಲಜಾ ಯರಗೇರಿ, ರವೀಂದ್ರನಾಥ ದೊಡ್ಡಮೇಟಿ ಮುಂತಾದವರು ಉಪಸ್ಥಿತರಿರುವರು.
ಮೊದಲ ದಿನದ ಗೋಷ್ಠಿಗಳು: ಸಂಜೆ 6ಕ್ಕೆ ಗದಗ ಜಿಲ್ಲಾ ದರ್ಶನ ಕುರಿತು ಮೊದಲನೆ ಗೋಷ್ಠಿ ಜರುಗಲಿದೆ. ಸಾಹಿತಿ ಪ್ರೊ. ಆರ್.ಎಲ್. ಪೊಲೀಸ್ಪಾಟೀಲ ಅಧ್ಯಕ್ಷತೆ ವಹಿಸುವರು. ಸಾಹಿತಿ ಅನಿಲ ವೈದ್ಯರಿಂದ ಆಶಯ ನುಡಿ, ಸಂಸ್ಕೃತಿ ಚಿಂತಕ ಪ್ರೊ. ಬಿ.ಎ. ಕೆಂಚರಡ್ಡಿ ಅವರಿಂದ ನೆಲ-ಜಲ ಮತ್ತು ಭಾಷೆ ಕುರಿತು, ಇತಿಹಾಸ ಪ್ರಾಧ್ಯಾಪಕ ಡಾ. ವೈ.ಎಸ್. ಬೇಲೇರಿ ಅವರಿಂದ ಇತಿಹಾಸ ಮತ್ತು ಪರಂಪರೆ ಕುರಿತು, ಸಾಹಿತಿ ಡಾ. ಅರ್ಜುನ ಗೊಳಸಂಗಿ ಅವರಿಂದ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ವಿಚಾರ ಚಿಂತನಾ ಗೋಷ್ಠಿಗಳು ಜರುಗಲಿವೆ.
ರಾತ್ರಿ 9ಕ್ಕೆ ಡಾ. ಸೋಮಶೇಖರ ಇಮ್ರಾಪುರ ಅವರ ಸಾಹಿತ್ಯ ಮತ್ತು ಸಾಧನೆ ಕುರಿತು 2ನೇ ಗೋಷ್ಠಿ ಜರುಗಲಿದೆ. ಸಾಹಿತಿ ಡಾ. ಶರಣಬಸವ ವೆಂಕಟಾಪುರ ಅವರಿಂದ ಆಶಯ ನುಡಿ ಜರುಗಲಿದ್ದು, ಡಾ. ಪ್ರಹ್ಲಾದ್ ಆಗಸಕಟ್ಟೆ ಅವರು ಅಧ್ಯಕ್ಷತೆ ವಹಿಸುವರು. ಕವಿವಿ ಪ್ರಾಧ್ಯಾಪಕ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರಿಂದ ಕಾವ್ಯ ನಡೆದು ಬಂದ ದಾರಿ ಕುರಿತು, ಜಾನಪದ ವಿಭಾಗದ ಪ್ರಾಧ್ಯಾಪಕ ಡಾ. ವಿ.ಎಲ್. ಪಾಟೀಲ ಅವರಿಂದ ಜಾನಪದ ಅಧ್ಯಯನ ಕುರಿತು, ಸಾಹಿತಿ ಡಾ. ಶ್ರೀಪಾದಶೆಟ್ಟಿ ಅವರಿಂದ ಸಾಹಿತ್ಯ ವಿಮರ್ಶೆ ಮತ್ತು ಅಂಕಣ ಬರಹಗಳು ಕುರಿತು ಚಿಂತನಗೋಷ್ಠಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸ್ಮರಣ ಸಂಚಿಕೆ ಬಿಡುಗಡೆ
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಂದ ಮಲಪ್ರಭೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಕಸಾಪ ಗ್ರಂಥ ಬಿಡುಗಡೆ, ಸಹಕಾರಿ ಸಚಿವ ಎಚ್.ಎಸ್. ಮಹಾದೇವ ಪ್ರಸಾದ ಅವರಿಂದ ಚಿತ್ರಕಲಾ ಪ್ರದರ್ಶನ ಉದ್ಘಾಟನೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರಿಂದ ಜಿಲ್ಲೆಯ ವಿವಿಧ ಲೇಖಕರ ಗ್ರಂಥ ಬಿಡುಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಸ್ವಾಗತ ಸಮಿತಿ ಸ್ವಾಗತಾಧ್ಯಕ್ಷ, ನರಗುಂದ ಶಾಸಕ ಬಿ.ಆರ್. ಯಾವಗಲ್ ಅವರಿಂದ ಪುಸ್ತಕ ಮಳಿಗೆ ಉದ್ಘಾಟನೆ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಂದ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ ಕಾರ್ಯಕ್ರಮಗಳು ನೆರವೇರಲಿವೆ.
3ಕ್ಕೆ ಸಿಎಂರಿಂದ ಉದ್ಘಾಟನೆ
ಮಧ್ಯಾಹ್ನ 3ಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಡಾ. ಸೋಮಶೇಖರ ಇಮ್ರಾಪುರ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಅನ್ನದಾನೇಶ್ವರ ಶ್ರೀಗಳು, ಸ್ವಾಮೀಜಿ, ಸಾನ್ನಿಧ್ಯವನ್ನು ಅಭಿನವ ಅನ್ನದಾನೀಶ್ವರ ಶ್ರೀಗಳು, ಕುದರಿಮೋತಿ ವಿಜಯಮಹಾಂತೇಶ ಶ್ರೀಗಳು ಉಪಸ್ಥಿತರುವರು. ಶಾಸಕ ಜಿ.ಎಸ್. ಪಾಟೀಲ ಸ್ವಾಗತಿಸುವರು. ಕಸಾಪ ರಾಜ್ಯಾಧ್ಯಕ್ಷ ಪುಂಡಲಿಕ ಹಾಲಂಬಿ ಅವರಿಂದ ಆಶಯ ನುಡಿ ಪ್ರಸ್ತುತಪಡಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement