ಟಿವಿಯಿಂದ ಮಾನಸಿಕ ನೆಮ್ಮದಿ ಹಾಳು
ಮುಳಗುಂದ: ಪ್ರಾಥಮಿಕ ಹಂತದಲ್ಲಿ ಕಲಿಯುವ ಶಾಲಾ ಮಕ್ಕಳು ಓದಿನೊಂದಿಗೆ ಪ್ರತಿದಿನ ಯೋಗ, ಪ್ರಾಣಾಯಾಮ ಮಾಡಿದರೆ ಆರೋಗ್ಯದ ಜತೆಗೆ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ಯೋಗ ಶಿಕ್ಷಕ ವೀರೇಶ ಅಣ್ಣಿಗೇರಿ ಹೇಳಿದರು.
ಅವರು ಸ್ಥಳಿಯ ಕೆಎಸ್ಎಸ್ ಪ್ರೌಢ ಶಾಲೆಯಲ್ಲಿ ಈಚೆಗೆ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಾಲಾ ಮಕ್ಕಳು ಮೊಬೈಲ್ ಹಾಗೂ ಟಿವಿ ನೋಡುವುದರಿಂದ ಜ್ಞಾಪಕ ಶಕ್ತಿ ಕ್ಷೀಣಿಸುವ ಜತೆಗೆ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಈ ಯೋಗ ಹಾಗೂ ಪ್ರಾಣಾಯಾಮದಿಂದ ಸದೃಢ ದೇಹ ಬೆಳೆಸುವ ಜತೆಗೆ ಸದೃಢ ಮನಸ್ಸನ್ನು ಹೊಂದಬಹುದು ಎಂದರು. ಯೋಗ ಶಿಕ್ಷಕ ಪ್ರಕಾಶ ಮದ್ದಿನ ಮಾತನಾಡಿ, ಮಕ್ಕಳ ಮನಸ್ಸಲ್ಲಿ ಏಕಾಗ್ರತೆ ಬರಲು ಯೋಗ ಅವಶ್ಯಕ ಎಂದರು. ಮುಖ್ಯೋಪಾಧ್ಯಾಯ ಬಿ.ಎಂ. ದಂಡಿನ, ಟಿ.ಎಂ. ಪವಾರ, ವೀರಣ್ಣ ತಡಸದ, ಸುರೇಶ ಎಡ್ರವಿ, ಅಶೋಕ ಸರ್ವದಿ, ದೈಹಿಕ ಶಿಕ್ಷಕ ಗಡಾದ, ಕೋರಿಶೆಟ್ರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್.ಬಿ. ಹರ್ತಿ ನಿರೂಪಿಸಿ, ವಂದಿಸಿದರು.
ಮೊಬೈಲ್ ಬಳಕೆಯಿಂದ ವಿದ್ಯಾಭ್ಯಾಸ ಕುಂಠಿತ: ವೀರಲಗಿ
ಮುಳಗುಂದ: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ತೋರದಿರಲು ಮೊಬೈಲ್ ಕಾರಣ ಎಂದು ಐಟಿಐ ಕಾಲೇಜಿನ ಪ್ರಾಚಾರ್ಯ ಶಂಭು ನೀರಲಗಿ ಹೇಳಿದರು. ಅವರು ಈಚೆಗೆ ಸ್ಥಳೀಯ ಕೆಎಸ್ಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ಪಾಠದ ಕಡೆ ಲಕ್ಷ್ಯವಹಿಸುತ್ತಿಲ್ಲ ಎಂದರು. ಶಿಕ್ಷಕ ಎಸ್.ಎಫ್. ಅಣ್ಣಿಗೇರಿ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವೈ.ಎನ್. ಗುಳಗುಂದಿ ಮಾತನಾಡಿದರು. ಕೆಎಸ್ಎಸ್ ಪ್ರೌಢಶಾಲೆಯ ಪ್ರಧಾನ ಗುರು ಬಿ.ಎಂ. ದಂಡಿ, ರಜನೀಶ ಸುರೇಬಾನ, ಭಾರತಿ ಗುದ್ದಿನ, ಶಿಕ್ಷಕ ಶ್ರೀನಿವಾಸ ಬೆಳಗಟ್ಟಿ, ಎಸ್.ಎಸ್. ದಿಬ್ಬದಮನಿ, ವಿ.ಬಿ. ಕಾಲಗೌಡ್ರ, ನವೀನ ಜಲ್ಲಾಪುರ, ಮುಂತಾದವರು ಇದ್ದರು.