ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉಚಿತ ಎಲುಬಿನ ಸಾಂದ್ರತೆ ತಪಾಸಣಾ ಶಿಬಿರ

Vishwanath S
Updated On : 24 Feb 2014, 11:06 am

ಹುಬ್ಬಳ್ಳಿ: ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸವಣೂರ ರಸ್ತೆಯಲ್ಲಿರುವ ಅಗಡಿ ಸನ್ರೈಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಉಚಿತ ಎಲುಬಿನ ಸಾಂದ್ರತೆ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಎಲುಬಿನ ವಿವಿಧ ರೀತಿಯ ತೊಂದರೆಗಳಿಂದ ಬಳಲುತ್ತಿದ್ದ ಸುಮಾರು 170ಕ್ಕೂ ಹೆಚ್ಚು ಜನರನ್ನು ಡಾ. ವರುಣ ಸವದಿ ತಪಾಸಣೆ ನಡೆಸಿ ಸಲಹೆ-ಸೂಚನೆ ನೀಡಿದರು. ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಮಾತನಾಡಿದ ಡಾ. ವರುಣ ಸವದಿ, ಆಸ್ಟಿಯೋಪೋರೊಸಿಸ್ ಎಂದರೆ ಎಲುಬು ಹಗುರವಾಗುವ ಕಾಯಿಲೆಯಾಗಿದೆ ಎಂದು ವಿವರಿಸಿದರಲ್ಲದೆ, ಈ ಕಾಯಿಲೆ ಅಲಕ್ಷಿಸಿದ್ದಲ್ಲಿ ರೋಗಿ ಸಾವಿನ ದವಡೆಗೆ ಸಿಲುಕಿ ಹಾಕಿಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.
ಈ ಕಾಯಿಲೆಯನ್ನು ಅಲಕ್ಷಿಸುವುದರಿಂದ ಬೆನ್ನುಮೂಳೆ ಮತ್ತು ಚಪ್ಪೆ ಮೊಳೆ ಮುರಿತಕ್ಕೆ ಕಾರಣವಾಗುತ್ತದೆ. ಆಸ್ಟಿಯೋಪೋರೊಸಿಸ್ ಕಾಯಿಲೆ ಬರದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವುದು ಸುಲಭ ಹಾಗೂ ಸರಳ ಎಂದೂ ಡಾ. ಸವದಿ ಹೇಳಿದರು. ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಹಾಲು, ಮೊಸರು, ತರಕಾರಿ ಮತ್ತು ಕ್ಯಾಲ್ಸಿಯಂಯುಕ್ತ ಆಹಾರ ಉಪಯೋಗಿಸುವುದರಿಂದ ಆಸ್ಟಿಯೋಪೋರೊಸಿಸ್ನಿಂದ ಪಾರಾಗಲು ಸಾಧ್ಯ ಎಂದರು.
ಶಿಬಿರದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಅಬ್ಹಿಗಾಂವಕರ, ವ್ಯವಸ್ಥಾಪಕ ನಿರ್ದೇಶಕ ಡಾ. ಅರುಣ ಪಾಟೀಲ, ಸ್ತ್ರೀ ರೋಗ ತಜ್ಞ ಡಾ. ರೇಶ್ಮಾ ರಾಠೋಡ, ಡಾ. ಪ್ರಕಾಶ ಗದಗ, ಅಗಡಿ ಎಂಜಿನಿಯರಿಂಗ್ ಕಾಲೇಜ್ನ ಪ್ರಾಂಶುಪಾಲ ಡಾ. ಎಸ್.ವಿ. ಗೋರಬಾಳ, ಡಾ.ಎಂ.ಬಿ. ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement