ಗುಂಪು ಘರ್ಷಣೆ: 12 ಜನರಿಗೆ ಗಾಯ
ಗದಗ: ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಬಣವಿ ಶೆಡ್ಡಿಗೆ ಸಂಬಂಧಿಸಿದಂತೆ 2 ಕೋಮಗಳ ನಡುವೆ ನಡೆದ ಜಗಳದಲ್ಲಿ ಒಟ್ಟು 12 ಜನರು ಗಾಯಗೊಂಡಿರುವ ಘಟನೆ ಭಾನುವಾರ ಜರುಗಿದೆ. ಹೊಂಬಳ ಗ್ರಾಮದಲ್ಲಿ ಹಾದಿಮನಿ ಮತ್ತು ಹುಲ್ಲಣ್ಣವರ ಎಂಬ ಎರಡು ಕುಟುಂಬಗಳಿದ್ದು, ಹಾದಿಮನಿ ಅವರ ನಿವೇಶನದಲ್ಲಿ ಹುಲ್ಲಣ್ಣವರ ಕುಟುಂಬದವರು ಬಣವಿ ಒಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಡೆದ ವಾದ ವಿವಾದ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪರಿಣಾಮವಾಗಿ 12 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.