ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜ್ಯೋತಿಷ್ಯ ಹೆಸರಲ್ಲಿ ಮೌಢ್ಯ ಪ್ರಸಾರ

Vishwanath S
Updated On : 25 Feb 2014, 11:05 am

ಗದಗ: ಜ್ಯೋತಿಷ್ಯ ಹೆಸರಲ್ಲಿ ಮೌಢ್ಯ ಪ್ರಸಾರ ಹೆಚ್ಚಳವಾಗುತ್ತಿದೆ ಎಂದು ಜ. ತೋಂಟದ ಸಿದ್ಧಲಿಂಗ ಶ್ರೀಗಳು ತೀವ್ರ ವಿಷಾದ ವ್ಯಕ್ತಪಡಿಸಿದರು.
ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ಈಚೆಗೆ ಜರುಗಿದ ಶಿವಾನುಭವದಲ್ಲಿ ಮೂಢನಂಬಿಕೆ ಮತ್ತು ದುಷ್ಪರಿಣಾಮ ಕುರಿತ ವಿಶೇಷ ಉಪನ್ಯಾಸ ಹಾಗೂ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಜಯಂತಿಯಲ್ಲಿ ಆಶೀರ್ವಚನ ನೀಡಿದರು.
ಮಾಧ್ಯಮಗಳಲ್ಲಿ ಜ್ಯೋತಿಷ್ಯವನ್ನು ಜೀವನದ ಅವಿಭಾಜ್ಯ ಅಂಶವೇನೂ ಎಂಬಂತೆ ಬಿಂಬಿಸಲಾಗುತ್ತಿದೆ. ಜನಸಾಮಾನ್ಯರಲ್ಲಿ ಜ್ಯೋತಿಷ್ಯ ತಿಳಿಯದೆ ಯಾವುದೇ ಕಾರ್ಯಕ್ಕೆ ಅಣಿಯಾಗದ ದುರ್ಬಲ ಮನೋಭಾವನೆ ಬೆಳೆಸಲಾಗುತ್ತಿದೆ. ಇಸ್ರೋ ಸಂಸ್ಥೆಯ ಅಧ್ಯಕ್ಷ ಡಾ. ರಾಧಾಕೃಷ್ಣನ್ ಅಂಥವರೂ ಉಪಗ್ರಹ ಉಡಾವಣೆಗೆ ವೆಂಕಪ್ಪನ ಪೂಜೆ ಮಾಡಿಸುವ ಪರಿಪಾಠ ಬೆಳೆದುಬಂದಿದೆ ಎಂದರು.
ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ-ದಾಸೋಹ-ಏಕದೇವೋಪಾಸನೆ, ನಿರಾಕಾರ ದೇವರ ಸ್ವರೂಪವಾದ ಇಷ್ಟಲಿಂಗ ಪೂಜೆ ಮೂಲಕ ದೇವರು ಧರ್ಮ ಹೆಸರಲ್ಲಿ ನಡೆಯುವ ಅನಿಷ್ಟ ಹಾಗೂ ಶೋಷಣೆಗಳನ್ನು ತೊಡೆದುಹಾಕಲು ಜನತೆ ಮುಂದಾಗಬೇಕು ಎಂದು ಕರೆಯಿತ್ತರು. ಧಾರವಾಡದ ಬಿ.ಎಸ್. ಸೊಪ್ಪಿನ ಮೂಢನಂಬಿಕೆ ಮತ್ತು ದುಷ್ಪರಿಣಾಮ ಕುರಿತು ಉಪನ್ಯಾಸ ನೀಡಿದರು. ರಾಜೇಶ್ವರಿ ಸಜ್ಜನರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಅಪ್ಪು ಮಾಲೀಪಾಟೀಲ ಹಾಗೂ ಆಕಾಶ ಕುಲಕರ್ಣಿ ಧರ್ಮಗ್ರಂಥ ಪಠಿಸಿದರು. ಶಿವಾನುಭವ ಭಕ್ತಿಸೇವೆ ವಹಿಸಿದ್ದ ಎಚ್. ಚಂದ್ರಶೇಖರ, ವಿಶೇಷ ನಿವೃತ್ತ ಜಿಲ್ಲಾಧಿಕಾರಿ ಎಂ.ವಿ. ಗೊಂಗಡಶೆಟ್ಟಿ, ಸಂಘದ ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ, ಶಿವಾನುಭವ ಸಮಿತಿ ಚೇರ್ಮನ್ ಎಸ್.ಎನ್. ಆದಿ ಮುಂತಾದವರು ಇದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಜಿ.ಪಿ. ಕಟ್ಟಿಮನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement