ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಲೆ ಹತ್ತಿರ ಕಸಾಯಿಖಾನೆ ಕಟ್ಟದಂತೆ ಜನರಿಂದ ಮನವಿ

Vishwanath S
Updated On : 26 Feb 2014, 11:18 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 25
ಪಟ್ಟಣದ ದೂದಪೀರಾಂ ಸರ್ಕಾರಿ ಸಂಯುಕ್ತ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಸಮೀಪದಲ್ಲಿ ದನದ ಕಸಾಯಿಖಾನೆ ಕಟ್ಟದಂತೆ ಆಗ್ರಹಿಸಿ ಸೋಮವಾರ ಇಲ್ಲಿನ ಸಾರ್ವಜನಿಕರು ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ದೂದಪೀರಾ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಪಕ್ಕದಲ್ಲಿಯೇ ದನದ ಮಾಂಸವನ್ನು ಕಡಿಯುವ ಅಂಗಡಿಗಳಿರುವ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಪುರಸಭೆಯಲ್ಲಿ ಈ ಕುರಿತಂತೆ ಕಸಾಯಿಖಾನೆಯನ್ನು ಅಲ್ಲಿಂದ ಸ್ಥಳಾಂತರಿಸುವ ನಿರ್ಧಾರವನ್ನು ಕೈಗೊಂಡಿತ್ತು. ಆದರೆ, ಈಗಿರುವ ಸ್ಥಳದ ಪಕ್ಕದಲ್ಲಿಯೇ ಈ ಮಾಂಸದಂಗಡಿ ಪ್ರಾರಂಭಿಸಲು ಕಟ್ಟಡ ಕಟ್ಟುವ ಕಾರ್ಯ ಪ್ರಾರಂಭಿಸಿದ್ದು, ಇದನ್ನು ವಿರೋಧಿಸಿ ಶಾಲೆಯವರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ಕೂಡಲೇ ಕ್ರಮ ತೆಗೆದುಕೊಳ್ಳುವದು ಅವಶ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದರು. ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಡಿ.ಬಿ. ಬಳಿಗಾರ, ಮಲ್ಲೇಶ ಅಂಕಲಿ, ಗಂಗಾಧರ ಅಂಕಲಿ, ನಾಗರಾಜ ಚಿಂಚಲಿ, ಮಲ್ಲನಗೌಡ, ಮಹಾಂತೇಶ ಸುಣಗಾರ, ಪ್ರಕಾಶ ಮೇವುಂಡಿ, ರಮೇಶ ಗಾಣಿಗೇರ, ಯಲ್ಲಪ್ಪ ದಾನಿ, ವಿರೂಪಾಕ್ಷಪ್ಪ ಬಳಿಗಾರ, ಎಸ್.ಎಫ್. ಮುಳಗುಂದ, ನಿಂಗಪ್ಪ, ಪಿ.ಜಿ. ಮುಳಗುಂದ ಮುಂತಾದವರು ಹಾಜರಿದ್ದರು. ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಮುಖ್ಯಾಧಿಕಾರಿ ಉಮೇಶ ಗುಡ್ಡದ ಮನವಿ ಸ್ವೀಕರಿಸಿ ಕಾಮಗಾರಿಯನ್ನು ತಕ್ಷಣದಿಂದ ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement