ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ಷೀರಭಾಗ್ಯ: ಬಿಸಿ ಹಾಲು ಪೂರೈಕೆಗೆ ಸೂಚನೆ

Lingaraj Badiger
Updated On : 27 Feb 2014, 11:16 am

ನವಲಗುಂದ: ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ಹಾಲನ್ನು ಪೂರೈಸುವಂತೆ ತಾಪಂ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ ಅಧಿಕಾರಿಗಳಿಗೆ ಆದೇಶ ನೀಡಿದರು.
ತಾಪಂ ಸಭಾ ಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಪೂರೈಕೆಯಾಗುತ್ತಿರುವ ಹಾಲು ಬಿಸಿ ಇರದೇ ಇರುವುದರಿಂದ ವಿದ್ಯಾರ್ಥಿಗಳು ಸೇವಿಸಲು ಹಿಂದೇಟು ಹಾಕುತ್ತಿರುವುದು ತಾವು ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡಿದಾಗ ಗಮನಕ್ಕೆ ಬಂದಿದೆ ಎಂದ ಪಟ್ಟಣಶೆಟ್ಟಿ, ಬಿಸಿ ಹಾಲನ್ನೇ ಪೂರೈಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ ಅವರಿಗೆ ಸೂಚಿಸಿದರು.
ಬೆಳವಟಗಿ ತಾಪಂ ಸದಸ್ಯೆ ಲಲಿತಾ ಕುಲಕರ್ಣಿ, ಪಶುವೈದ್ಯರು ಹಳ್ಳಿಗೆ ಆಗಮಿಸಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಪಡಿತರ ಚೀಟಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. ಹೆಸ್ಕಾಂ ಅಧಿಕಾರಿ ಶ್ರೀನಿವಾಸ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಂ.ಎಂ. ಸವದತ್ತಿ, ಉಪಾಧ್ಯಕ್ಷ ನೀಲವ್ವ ತಳವಾರ, ಸದಸ್ಯರಾದ ಸಾವಿತ್ರಿ ಕುರ್ಲಗೇರಿ, ಶ್ಯಾಮಲಾ ಕೆರಿಮನಿ, ಲಲಿತಾ ನಾನಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement