ದೊಡ್ಡ ರಿಕ್ಷಾಗಳಲ್ಲಿ ಪ್ರಯಾಣವನ್ನು ನಿಷೇಧಿಸಿ: ಆಟೋ ಚಾಲಕರ ಮನವಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 27
ಆಟೋರಿಕ್ಷಾ, ಟಂಟಂ, ಎಲ್ಪಿಜಿ, ಪೆಟ್ರೋಲ್ ದೊಡ್ಡ ರಿಕ್ಷಾ ಹಿಂದುಗಡೆ ಓಪನ್ ಇರುವ ಗಾಡಿಗಳಿಗೆ ಪರವಾನಗಿ ಸಾರ್ವಜನಿಕರ ಪ್ರಯಾಣ ನಿಷೇಧಿಸುವಂತೆ ಒತ್ತಾಯಿಸಿ ಈಚೆಗೆ ಯಂಗ್ ಇಂಡಿಯಾ ಪರಿವಾರ ಆಟೋ ಚಾಲಕರು, ಮಾಲೀಕರು, ಜಿಲ್ಲಾ ಆಟೋ ಚಾಲಕರು, ಮಾಲೀಕರು ಡಿಸಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಈಚೆಗೆ ಅತಿಯಾಗಿ ಆಟೋರಿಕ್ಷಾ, ಟಂಟಂ ಹಿಂದೆ ಓಪನ್ ಇರುವ ಗಾಡಿಗಳು ಸಾರಿಗೆ ಬಸ್ತರಹ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿವೆ. ಇದರಿಂದ ಸಣ್ಣ ಅಟೋ ಅಂದರೆ(3/1 ಗಾಡಿ) ಚಾಲಕರಿಗೆ ತೀವ್ರ ತೊಂದರೆಯಾಗಿದೆ. ದೊಡ್ಡ ಆಟೋಗಳಲ್ಲಿ 1 ರಿಂದ 15 ಜನ ಹಾಕಿಕೊಂಡು ಶಹರದಲ್ಲಿ ಓಡಾಡುತ್ತಿವೆ. ಇದರಿಂದ ಸಾಮಾನ್ಯ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಜಿಲ್ಲಾಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಈ ರಿಕ್ಷಾ ಗಾಡಿಗಳನ್ನು ಸಂಚರಿಸಬೇಕೆಂದು ಸೂಚಿಸಬೇಕು. ಶಹರದಲ್ಲಿ ಇಂತಹ ವಾಹನ ಸಂಚಾರ ನಿಷೇಧಿಸಬೇಕು. ಅಂದಾಗ ಸಣ್ಣ ಆಟೋ ರಿಕ್ಷಾ ಚಾಲಕರಿಗೆ ಅನುಕೂಲವಾಗುತ್ತದೆ. ಶಹರದಲ್ಲಿ ಓಡಾಡುವ ಟಂಟಂ ಕಡ್ಡಾಯವಾಗಿ ಧ್ವನಿವರ್ಧಕ ಇನ್ನಿತರ ಮನರಂಜನೆ ಸಾಮಗ್ರಿ ತೆಗೆಯಲು ಸೂಚಿಸಬೇಕು. ಪರ್ಮಿಟ್ ನೀಡಬಾರದು, ನೀಡಿದ್ದು ಕಂಡು ಬಂದಲ್ಲಿ ಬಂದ್ ಘೋಷಿಸಲಾಗುವುದು. ಜಿಲ್ಲೆಯಲ್ಲಿ 3/1 ಸಣ್ಣ ಆಟೋಗಳಿಗೆ ಮಾತ್ರ ಶಹರದಲ್ಲಿ ಸಂಚರಿಸಲು ಅನುಮತಿ ನೀಡಬೇಕು. ದೊಡ್ಡ ಆಟೋ ಕಾರ್ಯಾಚರಣೆ ನಿಷೇಧಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಶಿವಾನಂದ ಚಲವಾದಿ, ದಾವಲಸಾಬ ದೊಡ್ಡಮನಿ, ಬಸವರಾಜ ಹಡಗಲಿ, ಸಿಕಂದರ ಬೇಲೇರಿ, ನಾಗರಾಜ ಗುಳೇದಗುಡ್ಡ, ಹನೀಫ ಡುಬ್ಬಾಳ, ರಫೀಕ ಕೊಟ್ಟೂರ, ರಮೇಶ ಕಬಾಡಿ, ಸುರೇಶ ಸೋಳಂಕಿ, ಶಿವು ಅಗಸನಕೊಪ್ಪ, ಮಾರುತಿ ಗೌಳಿ, ಉದಯ ಪನ್ನೂರ, ಸಾಧಿಕ ಖಾನಾಪುರ, ಅಬ್ದುಲ್ಖಾದರ ಬದಿಗ್ಗಿ, ಶಿದ್ದು ಶಿರೂರ, ಶರಣಪ್ಪ ಅಗ್ಗದ, ಮಾಬುಸಾಬ್ ಕಳಸದ, ಶ್ರೀನಿವಾಸ ಹರಿಜನ, ರವಿ ಆಂಗಡಿ, ಹನುಮಂತ ಮರಳನವರ, ಕೃಷ್ಣ ಬಹಿರವಾಡೆ, ರವಿ ರಾಲದೊಡ್ಡಿ, ಶರಣಪ್ಪ ಲಕ್ಕುಂಡಿ, ಮುನ್ನಾ ಮುಲ್ಲಾ, ಮಲ್ಲಯ್ಯ ಕುಲಕರ್ಣಿ, ಸೋಮು ಇಟಗಿ, ಮಲ್ಲೇಶ ಮುಂಡರಗಿ ಮುಂತಾದವರು ಉಪಸ್ಥಿತರಿದ್ದರು.