ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೋಳಿವಾಡಗೆ ಸಚಿವ ಸ್ಥಾನಕ್ಕಾಗಿ ಕೇಶಮುಂಡನ

Lingaraj Badiger
Updated On : 2 Jan 2014, 12:37 pm

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜ. 1
ಅನುಭವಿ ಶಾಸಕ ಕೆ.ಬಿ. ಕೋಳಿವಾಡ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿ ತಾಪಂ ಉಪಾಧ್ಯಕ್ಷ ಗಣೇಶಪ್ಪ ಬಿಲ್ಲಾಳ ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು.
ಐದು ಬಾರಿ ಶಾಸಕರಾಗಿರುವ ಕೋಳಿವಾಡರಿಗೆ ಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನ-ಮೇಷ ಎಣಿಸುತ್ತಿದ್ದಾರೆ. ಕೋಳಿವಾಡರಿಗೆ ತಕ್ಷಣ ಮಂತ್ರಿ ಸ್ಥಾನ ನೀಡಿ, ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಹಾವೇರಿ ಅಭಿವೃದ್ಧಿಗೆ ಸಹಕರಿಸುವಂತೆ ಆಗ್ರಹಿಸಿದರು.
ಬಿಲ್ಲಾಳ ಅವರೊಂದಿಗೆ ಸಾರ್ವಜನಿಕವಾಗಿ ಕೇಶ ಮುಂಡನ ಮಾಡಿಸಿಕೊಂಡು ದಿಳ್ಳೆಪ್ಪ ಅಣ್ಣೇರ, ಮೇಡ್ಲೆರಿ ಗ್ರಾಪಂ ಸದಸ್ಯರಾದ ಗಣೇಶ ಕರ್ತಿಮಾಳಮ್ಮನವರ, ಕಲಿಂ ಶಿಕಲ್‌ಗಾರ, ರಾಮಪ್ಪ ಬಿಂಗೇರ, ಬೀರೇಶ ವ್ಯಾಪಾರಿ ಗಮನ ಸೆಳೆದರು.
ದಿಳ್ಳೆಪ್ಪ ಅಣ್ಣೇರ ಮಾತನಾಡಿ, ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಕೋಳಿವಾಡರು ಶಾಸಕರಾದರೆ ಸಚಿವ ಸ್ಥಾನ ನೀಡಿ, ಜಿಲ್ಲೆಯ ಉಸ್ತುವಾರಿ ವಹಿಸುವುದಾಗಿ ಭರವಸೆ ನೀಡಿದ್ದರು. ಈವರೆಗೂ ಏಕೆ ಸಚಿವ ಸ್ಥಾನ ನೀಡಿಲ್ಲ? ಕೋಳಿವಾಡರಿಗೆ ಶೀಘ್ರದಲ್ಲಿ ಸಚಿವ ಸ್ಥಾನ ನೀಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಗ್ರಾಪಂ ಸದಸ್ಯ ಕರಿಯಪ್ಪ ಬಿಲ್ಲಾಳ, ಗ್ವಾರಜ್ಜ ಗೂರಮಾಳದ, ನಾಗಪ್ಪ ಪೂಜಾರ, ವಿಷ್ಣಪ್ಪ ಪೂಜಾರ, ರಾಜೇಂದ್ರ ಅಂಬಿಗೇರ ಇದ್ದರು. ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement