ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿಕ್ಷಣದಿಂದ ಅಭಿವೃದ್ಧಿ

Lingaraj Badiger
Updated On : 2 Jan 2014, 12:37 pm

ಲಕ್ಷ್ಮೇಶ್ವರ: ಶಿಕ್ಷಣ ನಮ್ಮನ್ನು ಹೊಸ ಜಗತ್ತಿನೆಡೆಗೆ ಹೊಸ ಬೆಳಕಿನಲ್ಲಿ ಸಾಗುವಂತೆ ಮಾಡುತ್ತದೆ ಎಂದು ಲೋಕೇಶ ದೊಡ್ಡಮನಿ ಅಭಿಪ್ರಾಯಪಟ್ಟರು. ಒಡೆಯರ ಮಲ್ಲಾಪುರ ಪ್ರಾಥಮಿಕ ಶಾಲೆ ಮಕ್ಕಳಿಗೆ ದಾನಿಗಳು ನೀಡಿದ ಸಮವಸ್ತ್ರ ವಿತರಿಸಿ, ಮಕ್ಕಳಿಗೆ ಉತ್ತಮ ಮೌಲ್ಯ, ಆದರ್ಶ ಕಲಿಸುವ ಹೊಣೆ ಸಮಾಜ ಮತ್ತು ಶಿಕ್ಷಕರ ಮೇಲಿದೆ. ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಹಣ ವ್ಯಯಿಸುತ್ತಿದ್ದು, ಯೋಜನೆ ಸದುಪಯೋಗ ಮಾಡಿಕೊಂಡು ಪ್ರಗತಿ ಸಾಧಿಸಬೇಕು ಎಂದರು. ಗ್ರಾಪಂ ಸದಸ್ಯ ಪದ್ಮರಾಜ ಪಾಟೀಲ ಮಾತನಾಡಿದರು. ನೀಲಪ್ಪ ಪಶುಪತಿಹಾಳ, ನೀಲಪ್ಪ ಶೆರಸೂರಿ, ನಾಗರಾಜ ಪಾಟೀಲ, ರಮೇಶ ಪಶುಪತಿಹಾಳ, ಫಕ್ಕಿರೇಶ ಬಾರ್ಕಿ, ಕೊಡೆಪ್ಪ ಡಂಬಳ, ರಮೇಶ ಪಶುಪತಿಹಾಳ, ನೀಲಪ್ಪ ತಳವಾರ, ಹನುಮಂತಪ್ಪ ಬಾರ್ಕಿ ಇದ್ದರು. ಶಿಕ್ಷಕ ಫಕ್ಕಿರೇಶ ಚಾಕಲಬ್ಬಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಕೃಷ್ಣ ಲಮಾಣಿ ವಂದಿಸಿದರು.
ಗುತ್ತಲದಲ್ಲಿ ಕಾರ್ತಿಕೋತ್ಸವ
ಹಾವೇರಿ: ಕನ್ನಡ ಹಾಗೂ ಸಂಸ್ಕೃತದಲ್ಲಿ ಮಂತ್ರ ಪಠಣ ಮಾಡಿ ಪೂಜೆ ನಡೆಯುವ ಗುತ್ತಲದ ಹೇಮಗಿರಿ ಚನ್ನಬಸವೇಶ್ವರ ಮಠದಲ್ಲಿ ಕಾರ್ತಿಕೋತ್ಸವದ ನಿಮಿತ್ತ ಭಕ್ತರು ಬುಧವಾರ ರಾತ್ರಿ ಹಣತೆಗಳನ್ನು ಹಚ್ಚಿ ಭಕ್ತಿ-ಭಾವ ಮೆರೆದರು. ರಸ್ತೆಗಳ ಇಕ್ಕೆಲ್ಲಗಳಲ್ಲಿ ಇಟ್ಟಿದ್ದ ಸಾಲ ದೀಪಗಳನ್ನು ಭಕ್ತರು ಹಚ್ಚಿದರು. ಮಠದ ಎದುರಿನ ಕಲ್ಯಾಣ ಮಂಟಪದಲ್ಲಿ ಅತ್ಯಾಕರ್ಷಕ ರಂಗೋಲಿ ಮಧ್ಯೆ ಸಾಲಂಕೃತ ದೀಪಗಳ ಸಾಲು ಗಮನ ಸೆಳೆದರೆ, ಮಠ ಹಾಗೂ ನಗಾರಿಖಾನೆ ಬೆಳಕಿನಲ್ಲಿ ಮಿಂದವು. ಮನೆಗಳ ಮುಂಭಾಗದಲ್ಲೂ ಗ್ರಾಮಸ್ಥರು ಹಣತೆ ಹಚ್ಚಿದರು. ರಾಣಿಬೆನ್ನೂರು, ಹಾವೇರಿ, ಬ್ಯಾಡಗಿ, ಹಾವನೂರು, ಕಂಚಾರಗಟ್ಟಿ, ಬಸಾಪುರ, ನೆಗಳೂರ, ಬೆಳವಿಗಿ, ಎಂ.ಜಿ. ತಿಮ್ಮಾಪುರ, ಬೊಮ್ಮನಕಟ್ಟಿ, ಹೊಸರಿತ್ತಿ, ಅಕ್ಕೂರ, ಮರಡೂರ, ಕನವಳ್ಳಿ, ಭರಡಿ, ಕೂರಗುಂದ ಊರುಗಳಿಂದ ಭಕ್ತರು ಆಗಮಿಸಿದ್ದರು. ನೂತನ ಹೇಮಗಿರಿ ಕಲ್ಯಾಣ ಮಂಟಪದಲ್ಲಿ ಅನ್ನ ಸಂತರ್ಪಣೆ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement