ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಮಗಾರಿ ಕಳಪೆ: ಹಾವಿನಾಳ ಕಿಡಿ

Lingaraj Badiger
Updated On : 3 Jan 2014, 12:29 pm

ಮುಂಡರಗಿ: ತಾಲೂಕಿನ ಬಿದರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆರ್.ಎಂ.ಎಸ್. ಯೋಜನೆ ಅಡಿಯಲ್ಲಿ ರು. 46.68 ಲಕ್ಷದಲ್ಲಿ ನಿರ್ಮಾಣವಾಗುತ್ತಿರುವ ಎರಡು ಮಹಡಿಯ ಕಟ್ಟಡ ಸಂಪೂರ್ಣ ಕಳಪೆಯಾಗಿದೆ ಎಂದು ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಆರೋಪಿಸಿದರು.
ಅವರು ಶಾಲೆಯ ಎಸ್‌ಡಿಎಂಸಿ ಸದಸ್ಯರ ದೂರಿನನ್ವಯ ಬುಧವಾರ ಶಾಲೆಗೆ ಭೇಟಿ ನೀಡಿ, ಕಟ್ಟಡ ವೀಕ್ಷಣೆ ಮಾಡಿ ಮಾತನಾಡಿದ ಅವರು, ಕಟ್ಟಡ ಇನ್ನೂ ನಿರ್ಮಾಣದ ಹಂತದಲ್ಲಿಯೇ ಕಳಪೆಯಾಗಿದೆ. ಇದಕ್ಕೆ ಬಳಕೆ ಮಾಡಲಾಗಿರುವ ಸಿಮೆಂಟ್ ಇಟ್ಟಂಗಿಗಳು ಕಳಪೆ ಮಟ್ಟದ್ದಾಗಿವೆ. ಈಗಾಗಲೇ ಅನೇಕ ಕಡೆಗಳಲ್ಲಿ ಇಟ್ಟಂಗಿಗಳು ಒಡೆದು ಹಾಳಾಗಿ ಹೋಗಿದ್ದು, ಮುಂದೆ ಇದರ ಮೇಲೆ ನಿರ್ಮಾಣವಾಗಬೇಕಾಗಿದ್ದ ಎರಡು ಮಹಡಿಗಳ ಕಟ್ಟಡದ ಗತಿ ದೇವರೇ ಬಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟದ ಕಟ್ಟಡ ನಿರ್ಮಿಸಲು ಸಂಬಂಧಪಟ್ಟವರಿಗೆ ತಾಕೀತು ಮಾಡಬೇಕೆಂದು ಕೆಲವು ಎಸ್‌ಡಿಎಂಸಿ ಸದಸ್ಯರು ಹೇಮಗಿರೀಶ ಹಾವಿನಾಳ ಅವರಿಗೆ ಒತ್ತಾಯಿಸಿದರು.
ಹೇಮಗಿರೀಶ ಹಾವಿನಾಳ ಸಂಬಂಧಪಟ್ಟವರ ಜತೆಗೆ ದೂರವಾಣಿಯಲ್ಲಿ ಮಾತನಾಡಿ, ಕಟ್ಟಡದ ಗುಣಮಟ್ಟವನ್ನು ಕಾಯ್ದುಕೊಳ್ಳದಿದ್ದರೆ ಕಟ್ಟಡವನ್ನು ಸಂಪೂರ್ಣ ನಾಶಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಲೋಕೇಶ ದೊಡ್ಡಮನಿ, ಸುರೇಶ ಮಾಗಡಿ, ಮುತ್ತಪ್ಪ ಚವಡಾಳ, ಸಿದ್ದಲಿಂಗಯ್ಯ ಗುರುವಿನ, ಶಾಂತಪ್ಪ ರಾಟಿ, ಪೂರ್ವಾಚಾರಿ ಸೋನಾರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement