ತಟ್ಟೆ ತಯಾರಿಕೆಗೆ ತರಬೇತಿ
ಗದಗ: ಅಡಕೆ ಹಾಳೆಯಿಂದ ಊಟದ ತಟ್ಟೆ, ಕಪ್ ಮುಂತಾದವುಗಳ ತಯಾರಿಕೆ ಕುರಿತಂತೆ ಬೆಂಗಳೂರಿನ ಸಣ್ಣ ಕೈಗಾರಿಕಾ ಅಭಿವೃದ್ಧಿ ಕೇಂದ್ರವು ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಜ. 27 ರಿಂದ 5 ದಿನಗಳ ಕಾಲ ನಡೆಯುವ ಈ ತರಬೇತಿಗೆ ಎಸ್.ಎಸ್.ಎಲ್.ಸಿ. ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಬಿಳಿ ಹಾಳೆಯಲ್ಲಿ ಸ್ವ-ವಿವರದ ಹಾಗೂ ಸಂಪರ್ಕ ವಿವರಗಳನ್ನು ಬರೆದು ನಿರ್ದೇಶಕರು, ಎಂ.ಎಸ್.ಎಂ.ಇ.ಡಿ 1 ಭಾರತ ಸರ್ಕಾರ, ರಾಜಾಜಿನಗರ, ಬೆಂಗಳೂರು-560010 ಇವರಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 080-23151581 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅಂತಿಮ ಪಟ್ಟಿ ಪ್ರಕಟ
ಗದಗ: 2013-14 ನೇ ಸಾಲಿನ ಬಿ.ಇಡಿ. ಕೋರ್ಸ್‌ಗೆ ಸರ್ಕಾರಿ ಕೋಟಾದ ಸೀಟುಗಳ ಅಂತಿಮ ಪಟ್ಟಿಯನ್ನು ಜ. 3 ರಂದು ಇಲಾಖಾ ವೆಬ್‌ಸೈಟ್ ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ನಲ್ಲಿ ಪ್ರಕಟಿಸಲಾಗುವುದು. ಈ ಪಟ್ಟಿಯನ್ನು ಡಯಟ್, ಕಳಸಾಪುರ ರಸ್ತೆ ಗದಗ ಕಚೇರಿಯಲ್ಲಿ ಜ. 4ರಂದು ಪ್ರಕಟಿಸಲಾಗುತ್ತದೆ. ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಹಂಚಿಕೆಯಾದ ಸಂಸ್ಥೆ ಒಪ್ಪಿಗೆಯಾದಲ್ಲಿ ಎಲ್ಲ ಮೂಲ ದಾಖಲೆಗಳನ್ನು ಜ. 4 ರಿಂದ 10 ರೊಳಗೆ ಸಲ್ಲಿಸಿ ದಾಖಲಾತಿ ಪಡೆದುಕೊಳ್ಳುವಂತೆ ಡಯಟ್ ಪ್ರಾಚಾರ್ಯ ಬಿ.ಎಸ್. ರಘುವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.