ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಶಾಂತಿಗೆ ಮೌಲ್ಯಗಳ ಕುಸಿತವೇ ಕಾರಣ

Rashmi Kasaragodu
Updated On : 5 Jan 2014, 1:12 am

ಗದಗ:  ಸಮಾಜದಲ್ಲಿನ ದುಃಖ, ಅಶಾಂತಿಗೆ ಮೌಲ್ಯಗಳ ಕುಸಿತವೇ ಕಾರಣ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಜಯಂತಿ ಹೇಳಿದರು. ಅವರು ಈಚೆಗೆ ಸ್ಥಳೀಯ ಬಸವೇಶ್ವರ ನಗರದಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಪೊಲೀಸ್ ಸಿಬ್ಬಂದಿಗೆ ಮೌಲ್ಯಗಳು ಮತ್ತು ಮಾನಸಿಕ ಒತ್ತಡ ನಿರ್ವಹಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಈಶ್ವರೀಯ ವಿಶ್ವವಿದ್ಯಾಲಯ ಮನಸ್ಸನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ತರಬೇತಿಯನ್ನು ನೀಡುತ್ತಿದೆ. ಆಧ್ಯಾತ್ಮಿಕ ಆರೋಗ್ಯದ ತಳಹದಿಯ ಮೇಲೆ ಉಳಿದ ಎಲ್ಲ ಆರೋಗ್ಯವು ನೆಲೆಗೊಳ್ಳಲು ಸಾಧ್ಯ ಎಂದರು. ಸಿಪಿಐ ಟಿ. ಫೈಜುದ್ದೀನ್ ಉದ್ಘಾಟಿಸಿ ಮಾತನಾಡಿದರು. ಕರಿಯಪ್ಪ ಗಾಂಜಿ ಸೇರಿದಂತೆ ಜಿಲ್ಲೆಯ ನೂರಾರು ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement