ಆಮ್ ಆದ್ಮಿ ಘಟಕ ರಚನೆ ಇಂದು
ಶಿಗ್ಗಾಂವಿ: ಆಮ್ ಆದ್ಮಿ ಪಕ್ಷದ ಶಿಗ್ಗಾಂವಿ, ಸವಣೂರು ಹಾಗೂ ಶಿರಹಟ್ಟಿ ತಾಲೂಕು ಘಟಕಗಳನ್ನು ಜ. 5ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ವಿಧ್ಯುಕ್ತವಾಗಿ ಆರಂಭಿಸಲಾಗುವುದು ಎಂದು ಜಿಲ್ಲಾ ಸಂಚಾಲಕ ಶಿವಾನಂದ ಹರಳೇವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಂದು ತಾಲೂಕಿನ ಜನತೆ, ವಿದ್ಯಾಥಿಗಳು, ನಾಗರಿಕರು ಸೇರಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೈಜೋಡಿಸಬೇಕು. ಪಕ್ಷದ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವವರು ಪಕ್ಷದ ಸದಸ್ಯರಾದ ವಿನಯ ಚಿನ್ನಪ್ಪನವರ ಹಾಗೂ ಸಿದ್ಲಿಂಗಯ್ಯ ಹಿರೇಮಠ ಅವರನ್ನು ಭೇಟಿಯಾಗಬೇಕೆಂದು ಮನವಿ ಮಾಡಿದ್ದಾರೆ.