ಇಂದಿನಿಂದ ಎನ್.ಎಸ್.ಎಸ್. ಶಿಬಿರ
ಮುಂಡರಗಿ: ಸ್ಥಳೀಯ ಜ. ಅನ್ನದಾನೀಶ್ವರ ವಿದ್ಯಾ ಸಮಿತಿಯ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ ಮುಂಡರಗಿ ಹಾಗೂ ಕ.ವಿ.ವಿ. ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ರಾಷ್ಟ್ರೀಯ ಸೇವಾಯೋಜನೆಯ ವಿಶೇಷ ಶಿಬಿರವು ದತ್ತು ಗ್ರಾಮ ಬ್ಯಾಲವಾಡಗಿ ಗ್ರಾಮದಲ್ಲಿ ಜ. 5 ರಿಂದ 11 ರವರೆಗೆ ಜರುಗಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ.ಬೆಳವಟಗಿ ಹಾಗೂ ಎನ್.ಎಸ್.ಎಸ್. ಯೋಜನಾಧಿಕಾರಿ ಡಿ.ಸಿ.ಮಠ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜ. 5 ರಂದು ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಸಂಸ್ಥೆಯ ಗೌರವ ಕಾರ್ಯದರ್ಶಿ ಎ.ಕೆ. ಬೆಲ್ಲದ ಶಿಬಿರವನ್ನು ಉದ್ಘಾಟಿಸುವರು. ಡಾ. ನಾಡೋಜ ಅನ್ನದಾನೀಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಕಾಲೇಜು ಮೇಲ್ವಿಚಾರನಾ ಸಮಿತಿ ಅಧ್ಯಕ್ಷ ಆರ್.ಬಿ. ಡಂಬಳಮಠ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ತಹಸೀಲ್ದಾರ್ ಎಸ್.ಆರ್. ಶಿರಕೋಳ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ಆರ್.ಆರ್. ಹೆಗ್ಗಡಾಳ, ಬಿ.ಎಸ್. ಶಿವಶೆಟ್ಟರ ಮುಂತಾದವರು ಆಗಮಿಸುವರು. ಜ. 6ರಂದು ಬೆಳಗ್ಗೆ 9ಕ್ಕೆ ಜಾನುವಾರಗಳ ಉಚಿತ ತಪಾಸಣೆ ಜರುಗಲಿದೆ. ನಂತರ ಸಂಜೆ 6 ಗಂಟೆಗೆ ಡಾ. ಎಸ್.ವಿ.ತಿಗರಿಮಠ ಅವರಿಂದ ಉಪನ್ಯಾಸ ಜರುಗಲಿದ್ದು, ವಿಶ್ರಾಂತ ಪ್ರಾಚಾರ್ಯ ಎಸ್.ಬಿ.ಕೆ. ಗೌಡರ ಅಧ್ಯಕ್ಷತೆ ವಹಿಸುವರು. ಕೊಟ್ರಗೌಡ ಪಾಟೀಲ, ಆರ್.ಕೆ. ರಾಯನಗೌಡ್ರ, ಡಾ. ಬಿ.ಜಿ. ಜವಳಿ, ಲಿಂಗರಾಜಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ಎ.ಜಿ. ಕಡ್ಡಿ, ಕೆ.ಎಸ್. ರೋಣದ, ಎಸ್.ವೈ. ನಾಡಗೌಡ್ರ, ಕಾಶೀನಾಥ ಬಿಳಿಮಗ್ಗದ ಮುಂತಾದವರು ಪಾಲ್ಗೊಳ್ಳುವರು. ಜ. 7ರಂದು ಸಂಜೆ 6ಕ್ಕೆ ಗ್ರಾಮೀಣ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರದ ಕುರಿತು ಎಸ್.ಬಿ.ಎಂ. ಬ್ಯಾಂಕಿನ ವ್ಯವಸ್ಥಾಪಕ ಆರ್.ಕೆ.ಬಸವರಾಜ, ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ಎಂ.ಡಿ. ಹಾದಿಮನಿ, ಈಶ್ವರಪ್ಪ ಹಂಚಿನಾಳ ಉಪನ್ಯಾಸ ನೀಡುವರು. ಎಸ್.ಎಂ. ಕಮ್ಮಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಡಾ. ನಿಂಗು ಸೊಲಗಿ, ರಾಮು ಕಲಾಲ, ಬಸವರಾಜ ಬಿಸನಳ್ಳಿ, ಮಂಜುನಾಥ ಇಟಗಿ, ಆನಂದ ರಾಮೇನಹಳ್ಳಿ, ಎನ್.ವಿ. ಹಿರೇಮಠ, ಶರಣು ಸೊಲಗಿ, ಸಿ.ಕೆ. ಗಣಪ್ಪನವರ, ಗುಡುಸಾಬ ಲಕ್ಕುಂಡಿ, ಹುಸೇನ್ಸಾಬ್ ಶಿರಹಟ್ಟಿ ಆಗಮಿಸುವರು. ಜ. 8ರಂದು ಸದೃಢ ಭಾರತಕ್ಕಾಗಿ ಆರೋಗ್ಯವಂತ ಯುವಕರು ಕುರಿತು ಡಾ. ಪಿ.ಬಿ. ಹಿರೇಗೌಡ್ರ, ಹೇಮಂತಗೌಡ ಪಾಟೀಲ ಮಾತನಾಡುವರು. ಎ.ವೈ. ನವಲಗುಂದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಆನಂದಗೌಡ ಪಾಟೀಲ, ಡಿ.ಡಿ. ಮೋರನಾಳ, ಶೇಖರಾಜ ಹೊಸಮನಿ, ಅಶೋಕ ಹುಬ್ಬಳ್ಳಿ, ರಾಮಣ್ಣ ಬಳ್ಳಾರಿ, ಎಂ.ಕೆ. ತಳಗಡೆ, ಮುತ್ತು ಹಾಳಕೇರ, ಹನುಮಂತಪ್ಪ ಮಣ್ಣೂರ ಆಗಮಿಸುವರು. ಜ. 9 ರಂದು ಜಾನಪದೀಯ ಮೌಲ್ಯಗಳು ಕುರಿತು ಪ್ರೊ. ಸಿ.ಎಸ್. ಅರಸನಾಳ, ಡಾ. ವಿ.ಕೆ. ಕೋಳೂರಮಠ, ಬಿ.ಎಂ. ತಿಮ್ಮಾಪುರ, ಜೆ.ಎಸ್. ಕರಿಶೆಟ್ಟರ್, ಗಿರಿಜಾ ಹಸಬಿ, ಜೆ.ಎಸ್. ನಸರಿ ಮಾತನಾಡುವರು. ಎನ್.ಎಫ್. ದ್ಯಾವನಗೌಡ್ರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶರಣಪ್ಪ ಕುಬಸದ, ಎ.ಪಿ. ದಂಡೀನ, ಸುರೇಶ ಬಣಗಾರ ಮುಂತಾದವರು ಆಗಮಿಸುವರು. ಜ. 10 ರಂದು ಆರೋಗ್ಯದ ಕುರಿತು ಡಾ. ಅನ್ನದಾನಿ ಮೇಟಿ ಮಾತನಾಡಲಿದ್ದು, ಆರ್.ಎಲ್. ಪೊಲೀಸ್ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿ.ಆರ್. ಕಲಬುರ್ಗಿ, ಎ.ಎಸ್. ಕಲ್ಯಾಣಿ, ಡಾ. ಪ್ರಕಾಶ ಹೊಸಮನಿ ಮುಂತಾದವರು ಉಪಸ್ಥಿತರಿರುವರು. ಜ. 11ರಂದು ಸಂಜೆ 5-30ಕ್ಕೆ ಕಾಂತರಾಜ ಹಿರೇಮಠ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು, ಶಾಸಕ ರಾಮಕೃಷ್ಣ ದೊಡ್ಡಮನಿ, ಅನೇಕರು ಆಗಮಿಸಲಿದ್ದಾರೆಂದು ಡಿ.ಸಿ. ಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.