ಜಂಗಮಾಭಿವೃದ್ಧಿ ಸಂಘದ ಸಭೆ ಇಂದು
ಲಕ್ಷ್ಮೇಶ್ವರ: ಪಟ್ಟಣದ ಗೊಲ್ಲಾಳೇಶ್ವರ ದೇವಸ್ಥಾನದಲ್ಲಿ ಜ. 5ರ ಮಧ್ಯಾಹ್ನ 2 ಗಂಟೆಗೆ ಶಿರಹಟ್ಟಿ ತಾಲೂಕು ಜಂಗಮಾಭಿವೃದ್ಧಿ ಸಂಘದ ಸಭೆಯನ್ನು ಕರೆಯಲಾಗಿದೆ. ಸಭೆಗೆ ಬರುವಾಗ ತಮ್ಮ ಗ್ರಾಮದ ಜಂಗಮರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹಾಗೂ ಗಣತಿ ಕಾರ್ಯದ ಪ್ರಗತಿಯ ಬಗ್ಗೆ ವರದಿಯೊಂದಿಗೆ ಸಭೆಗೆ ಆಗಮಿಸಬೇಕು. ಅಲ್ಲದೇ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ಈ ಸಭೆಗೆ ಶಿರಹಟ್ಟಿ ತಾಲೂಕಿನ ಜಂಗಮ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ
ಮುಳಗುಂದ: ಸ್ಥಳೀಯ ಬಿ.ಸಿ. ಬಂಗಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಹರ್ಷಿತ್ ಸುಬ್ಬಣ್ಣವರ ಈಚೆಗೆ ಗದಗದಲ್ಲಿ ನಡೆದ ಪ್ರಾಥಮಿಕ ವಿಭಾಗದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಧಾರ್ಮಿಕ ಪಠಣ (ಸಂಸ್ಕೃತ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಶಾಲೆಯ ಪ್ರಧಾನ ಗುರುಮಾತೆ ಎ.ಕೆ. ಅಂಬಲಝರಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.