ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿನ್ನಿಂಗ್ ಫ್ಯಾಕ್ಟರಿ: ತಪ್ಪಿತಸ್ಥರ ವಿರುದ್ಧ ಮೊಕದ್ದಮೆ

Rashmi Kasaragodu
Updated On : 5 Jan 2014, 1:14 am

ಗಜೇಂದ್ರಗಡ:  ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ಜನರ ಬದುಕಿಗೆ ಕಂಟಕವಾದ ಜಿನ್ನಿಂಗ್ ಫ್ಯಾಕ್ಟರಿಗೆ ಶನಿವಾರ ಭೇಟಿ ನೀಡಿದ ತಹಸೀಲ್ದಾರ್ ಎ.ಜೆ. ಪಂಡಿತ ನೇತೃತ್ವದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು. ಅಲ್ಲಿರುವ ಆ್ಯಸಿಡ್ ಬ್ಯಾರೆಲ್ಗಳನ್ನು ಸೀಜ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದರು. ಎರಡೂ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿಬೀಜ ಡಿಲಿಂಕ್ ಮಾಡಲು ಶೇಖರಿಸಿದ ಆ್ಯಸಿಡ್ ಬ್ಯಾರೆಲ್ಗಳ ಪಂಚನಾಮೆ ಮಾಡಲು ತಹಸೀಲ್ದಾರರು ಅಧಿಕಾರಿಗಳಿಗೆ ಸೂಚಿಸಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪರವಾನಗಿ ಇಲ್ಲದಿರುವ ಬಗೆಗೆ ದೃಢ ಪಡಿಸಿಕೊಂಡರು. ರೈತರ ಅಹವಾಲು ಆಲಿಸಿದರು. ಪರಿಸರ ಸಂರಕ್ಷಣಾ ನಿಯಮಾವಳಿ ಗಾಳಿಗೆ ತೂರಿದ ಪರಿಣಾಮ ನೀರು ಹರಿದ ರೀತಿಯಲ್ಲಿ ಆ್ಯಸಿಡ್ ಹರಿಸಲಾಗಿದೆ. ಇದನ್ನು ಸೇವಿಸಿದ ಸಾಕು ಪ್ರಾಣಿಗಳು ಅಸುನೀಗಿವೆ. ಫ್ಯಾಕ್ಟರಿ ಸುತ್ತಲಿನ ಬೆಳೆಗಳು ಮತ್ತು ಮರಗಳು ಒಣಗಿವೆ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ತಿಳಿಸಿದರು. ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಗ್ರಾಮಲೆಕ್ಕಿಗ ಪಿ.ವೈ. ತಳವಾರ, ಆರ್.ಐ. ರಾಜಕ್ಕನವರ, ಗ್ರಾಮಸ್ಥರಾದ ಸುನೀಲ ಚಿಲ್ಝರಿ, ಆನಂದ ಬಾಂಡಗೆ, ಮಂಜುನಾಥ ಭಜಂತ್ರಿ, ಮಲ್ಲಿಕಾರ್ಜುನ ಕೆಂಪನಾಳ, ಮಂಜುನಾಥ ಮರಡಿ, ಮುತ್ತು ಕನ್ಯಾಳ, ಕಾಳಿಂಗ ಚಿಲ್ಝರಿ, ಕಳಕಪ್ಪ ಭಜಂತ್ರಿ, ಮುತ್ತು ಪಾಟೀಲ, ಪರಸಪ್ಪ ಕನ್ಯಾಳ, ಶಂಕ್ರಪ್ಪ ಹೂಗಾರ, ಕೆ.ಎಸ್. ಹೂಗಾರ, ಕರವೇಯ ಪ್ರಶಾಂತ ಕಲಾಲ, ಕುಮಾರ ಜುಂಜಾ, ಪ್ರಶಾಂತ ಬಡಿಗೇರ, ಅಕ್ಷಯ ವನ್ನಾಲ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement