ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಾಪನಾಶಿ: ಕರ ವಸೂಲಾತಿ ಮಾಸಾಚರಣೆ

Rashmi Kasaragodu
Updated On : 5 Jan 2014, 1:11 am

ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಪಂ ವ್ಯಾಪ್ತಿಯ ಪಾಪನಾಶಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಕರ ವಸೂಲಾತಿ ಮಾಸಾಚರಣೆ ಕಾರ್ಯಕ್ರಮವು ಶುಕ್ರವಾರ ಜರುಗಿತು. ಗ್ರಾಪಂ ಪಿಡಿಒ ಅಶ್ವಿನಿ ಕುರಡಗಿ ಮಾತನಾಡಿ, ಮನೆ ಮನೆಗಳಿಗೆ ತೆರಳಿ ಕರ ವಸೂಲಾತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದ್ದು,  ಈಗಾಗಲೇ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೇ ಗ್ರಾಮದ ಹಲವು ಸಾರ್ವಜನಿಕರು ಕರವಸೂಲಾತಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುತ್ತಿರುವುದು ಸಂತಸ ತಂದಿದೆ. ಈ ಜಾಗೃತಿ ಕಾರ್ಯಕ್ರಮ ಜ. 30 ರವರೆಗೆ ಜರುಗಲಿದೆ ಎಂದರು. ಗ್ರಾಪಂ ಸದಸ್ಯ ರಾಮಪ್ಪ ವರವಿ, ಪ್ರಶಾಂತಗೌಡ ಪಾಟೀಲ, ನೀಲವ್ವ ಚಿಲವಾಡಗಿ, ತುಕಾರಾಮ ಹುಲಗಣ್ಣವರ, ಮಹಾಂತೇಶ ದೊಡವಾಡ, ಶರಣಪ್ಪ ರಾಯಚೂರ, ಅಲ್ಲಾಭಕ್ಷಿ ಹಳ್ಳಿಕೇರಿ, ಹಾಲಪ್ಪ ಹೊಸಮನಿ ಹಾಗೂ ಗ್ರಾಪಂ ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement