ಭಾವನಾತ್ಮಕ ಸಂಬಂಧ ಕಣ್ಮರೆ: ಹುಯಿಲಗೋಳ
ಗದಗ: ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಭಾರತೀಯರ ಭಾವನಾತ್ಮಕ ಸಂಬಂಧದ ಕಣ್ಮರೆಯಾಗುತ್ತಿದೆ ಎಂದು ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಹೇಳಿದರು. ಈಚೆಗೆ ಅವರು ನಗರದ ಭಾರತೀಯ ಶಿಕ್ಷಣ ಸಂಸ್ಥೆಯ ಬಿಪಿನ್ ಚಿಕ್ಕಟ್ಟಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಪೂ ವಿಜ್ಞಾನ ಮಹಾವಿದ್ಯಾಲಯ ಹಾಗೂ ಬಿಪಿನ್ ಚಿಕ್ಕಟ್ಟಿ ಅಂತಾರಾಷ್ಟ್ರೀಯ ಶಾಲೆ ಇವುಗಳ ಆಶ್ರಯದಲ್ಲಿ ನಡೆದ ಅಜ್ಜ-ಅಜ್ಜಿಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ. ರಾಜೇಂದ್ರ ಗಡಾದ, ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ರವೀಂದ್ರ ಕೊಪ್ಪರ, ಸಂಸ್ಥಾಪಕ ಅಧ್ಯಕ್ಷ ಪ್ರೊ. ಎಸ್.ವೈ. ಚಿಕ್ಕಟ್ಟಿ ಮುಂತಾದವರು ಮಾತನಾಡಿದರು. ಹೇಮಾ ಜಂಗಮನಿ ಪ್ರಾರ್ಥಿಸಿದರು. ವಸೀಮ ಮೋಮಿನ್ ಸ್ವಾಗತಿಸಿದರು. ಶಿವಾನಿ ಜಗತಾಪ ನಿರೂಪಿಸಿದರು. ಭುವನೇಶ್ವರಿ ಮುಖಂಡಿ ವಂದಿಸಿದರು.