ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿಶ್ವಕರ್ಮ ಸಮಾಜದಿಂದ ಪತ್ರಕರ್ತರಿಗೆ ಸನ್ಮಾನ

Rashmi Kasaragodu
Updated On : 5 Jan 2014, 1:11 am

ಹೊಳೆಆಲೂರ:  ಇಲ್ಲಿನ ಯಚ್ಚರೇಶ್ವರ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಸ್ಥಳೀಯ ವಿಶ್ವಕರ್ಮ ಸಮಾಜದ ವತಿಯಿಂದ ಪತ್ರಿಕಾ ಪ್ರತಿನಿಧಿಗಳಿಗೆ ಸನ್ಮಾನ ಮತ್ತು 2014ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಗುರುವಾರ ಸಂಜೆ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಾಂಡುರಂಗ ಪತ್ತಾರ ವಹಿಸಿದ್ದರು.ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ನ ವ್ಯವಸ್ಥಾಪಕ ಎನ್.ಎ. ನಾಗೇಶ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶಿವಣ್ಣ ಯಾವಗಲ್, ಎ.ಎನ್. ಬಡಿಗೇರ, ಡಾ. ಡಿ.ಕೆ. ಕುಲಕರ್ಣಿ ಆಗಮಿಸಿದ್ದರು. 2014ರ ನೂತನ ಕ್ಯಾಲೆಂಡರ್ನ್ನು ಎನ್.ಎ. ನಾಗೇಶ ಬಿಡುಗಡೆ ಮಾಡಿದರು. ಪತ್ರಕರ್ತರಾದ ಸುಭಾಸ ದಾಮೋದರ, ಡಾ. ಪ್ರಭು ಗಂಜಿಹಾಳ, ವೀರಯ್ಯ ವಸ್ತ್ರದ, ಸಂಜೀವಕುಮಾರ ಹಿರೇಮಠ, ಶಂಕರ ಅಂಬಿಗೇರ ಅವರನ್ನು ವಿಶ್ವಕರ್ಮ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಯಚ್ಚರೇಶ್ವರ ಬಾಲವಿದ್ಯಾಮಂದಿರದ ಮಕ್ಕಳು ಪ್ರಾರ್ಥಿಸಿದರು. ಕಾರ್ಯದರ್ಶಿ ವಿಶ್ವನಾಥ ಬಡಿಗೇರ ಸ್ವಾಗತಿಸಿದರು. ಪಿ.ಎಲ್.ಪಂಚಾಳ ನಿರೂಪಿಸಿದರು. ಪ್ರಭಾಕರ ಪಂಚಾಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement