ಹಿರೇಮಠರ ಸೇವೆ ಸದಾಕಾಲ ಸ್ಮರಣೀಯ
ಗದಗ: ದಿಟ್ಟ ಹೋರಾಟಗಾರ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠರ ಸೇವೆ ಸದಾಕಾಲ ಸ್ಮರಣೀಯ ಎಂದು ಸಮಾಜ ಪರಿವರ್ತನಾ ಸಮುದಾಯದ ಸದಸ್ಯ ಡಾ. ಬಸವರಾಜ ಧಾರವಾಡ ಹೇಳಿದರು. ಅವರು ಶುಕ್ರವಾರ ನಗರದ ಮುಳಗುಂದ ರಸ್ತೆಯಲ್ಲಿರುವ ಬಸವರಾಜ ಹೊರಟ್ಟಿ ಸಭಾಭವನದಲ್ಲಿ ಸಿದ್ಧಲಿಂಗ ನಗರದ ಸಮಾನ ಮನಸ್ಕ ಗೆಳೆಯರ ಬಳಗ ಆಯೋಜಿಸಿದ್ದ ಒನ್ ಇಂಡಿಯಾ ಕರ್ನಾಟಕ ವರ್ಷದ ವ್ಯಕ್ತಿ-2013ರ ಪ್ರಶಸ್ತಿ ಪುರಸ್ಕೃತ ಎಸ್.ಆರ್. ಹಿರೇಮಠ ಅಭಿನಂದನಾ ಸಭೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಎಸ್.ಟಿ. ಬ್ಯಾಕೋಡ ಮಾತನಾಡಿದರು. ಬಿ.ಆರ್. ಪೊಲೀಸ್ಪಾಟೀಲ, ವೆಂಕಟೇಶ ಕುಲಕರ್ಣಿ, ಡಿ.ಆರ್. ಮುದ್ದೇಬಿಹಾಳ, ಆರ್.ಎಂ. ಪಾಟೀಲ, ಎ.ಕೆ. ಗುಡಿಸಾಗರ, ಸಣ್ಣವೀರಪ್ಪ, ಎ.ಕೆ. ಬಡಿಗೇರ, ಆರ್.ಎಂ. ಅರಹುಣಸಿ, ಎಸ್.ಎಂ. ಮೆಣಸಿನಕಾಯಿ, ಬಿ.ಆರ್. ಅಂಗಡಿ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಂ. ಅಗಡಿ ನಿರೂಪಿಸಿ, ವಂದಿಸಿದರು.