ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಿರೇಹಳ್ಳದ ಜಾಲಿಕಂಟಿ ತೆರವಿಗೆ ಆಗ್ರಹ

Rashmi Kasaragodu
Updated On : 5 Jan 2014, 1:12 am

ಗದಗ:  ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ ಗ್ರಾಮಕ್ಕೆ ಹೊಂದಿಕೊಂಡ ಹಿರೇಹಳ್ಳದಲ್ಲಿ ಕಳೆದ ಕೆಲವು ದಿನಗಳಿಂದ ಹೇರಳವಾಗಿ ಬೆಳೆದ ಜಾಲಿ ಕಂಟಿಯನ್ನು ಬುಡಸಮೇತ ಕಿತ್ತು ಹಾಕುವಂತೆ ಗ್ರಾಮದ ರೈತರು ಈಚೆಗೆ ತಹಸೀಲ್ದಾರ್ಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮಾಹಾದೇವಗೌಡ ಪಾಟೀಲ ಮಾತನಾಡಿ,  ಹಿರೇಹಳ್ಳ ಸಂಪೂರ್ಣವಾಗಿ ಮುಳ್ಳು ಕಂಟಿಯ ಮೂಲಕ ಮುಚ್ಚಿಹೋಗಿದೆ. ಜಿಲ್ಲಾಡಳಿತ ಕೂಡಲೇ ಹಳ್ಳದ ಮಾರ್ಗದಲ್ಲಿರುವ ಜಾಲಿಕಂಟಿ, ಕಸಕಡ್ಡಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.  ತಾಪಂ ಸದಸ್ಯ ಧರ್ಮಣ್ಣ ಭೂಸಗೌಡ್ರ, ಗ್ರಾಪಂ ಸದಸ್ಯ ಬಸವರಾಜ ಡೊಳ್ಳಿನ, ಎಪಿಎಂಸಿ ಸದಸ್ಯ ಹನುಮಪ್ಪ ದೊಡ್ಡಮನಿ, ದ್ಯಾಮಣ್ಣ ಬಡಿಗೇರ, ಶೇಖಪ್ಪ ಹೂಗಾರ, ಬಾಳಪ್ಪ ಬಿಳೇಕಲ್ಲ, ಭೀಮಪ್ಪ ಟಕ್ಕೇದ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement