ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿಜೃಂಭಣೆಯ ಅನ್ನದಾನೀಶ್ವರ ರಥೋತ್ಸವ

Lingaraj Badiger
Updated On : 6 Jan 2014, 12:41 pm

ನರೇಗಲ್ಲ:  ಸಮೀಪದ ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಮಹಾತಪಸ್ವಿ ಲಿಂ. ಅನ್ನದಾನ ಮಹಶಿವಯೋಗಿಗಳ 163ನೇ ಜಾತ್ರಾ ಮಹೋತ್ಸವ ಶನಿವಾರ ಸಂಜೆ ಅಭಿನವ ಅನ್ನದಾನ ಶ್ರೀಗಳ ಸಾನ್ನಿಧ್ಯದಲ್ಲಿ ಹರ-ಗುರು-ಚರ ಮುರ್ತಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಜನಾ ಮಂಡಳಿಯವರು, ಡೊಳ್ಳಿನ ವಾದ್ಯದವರು ಸೇರಿ ವಿವಿಧ ವಾದ್ಯ ಮೇಳಗಳು ಜರುಗಿದವು. ಇಟಗಿಯ ಸಕಲ ಸದ್ಭಕ್ತರಿಂದ ಕಲಾತ್ಮಕವಾದ ಢಮಣಿ ಗಾಡಿಯಲ್ಲಿ ರಥದ ಹಗ್ಗವನ್ನು ವಾದ್ಯ ವೃದದವರೊಂದಿಗೆ ತರುವ ದೃಶ್ಯ ನಯನ ಮನೋಹರವಾಗಿತ್ತು. ರಥೋತ್ಸವದಲ್ಲಿ ಹೊಸಪೇಟೆ, ಬಳ್ಳಾರಿ, ದಾವಣಗೆರೆ, ಬಾಗಲಕೋಟೆ, ಯಲಬುರ್ಗಾ, ಕೊಪ್ಪಳ ವಿವಿಧ ಜಿಲ್ಲೆ, ತಾಲೂಕುಗಳಿಂದ ಸದ್ಭಕ್ತರು ಆಗಮಿಸಿ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement