ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಕ್ಕನ ಬಳಗದಲ್ಲಿ ಸನ್ಮಾನ ಇಂದು

Lingaraj Badiger
Updated On : 7 Jan 2014, 12:29 pm

ಗದಗ:  ಗದುಗಿನ ಅಕ್ಕನ ಬಳಗದಲ್ಲಿ ಜ. 7ರಂದು 11ಕ್ಕೆ ಹೊಸ ವರ್ಷ ಆಚರಣೆ ನಿಮಿತ್ತ ಹಾಸ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಗದುಗಿನ ಕೆ.ಎಲ್.ಇ. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿಯ ಚೇರ್‌ಮನ್‌ರಾಗಿ ಆಯ್ಕೆಯಾದ ರಜನಿ ಪಾಟೀಲ ಅವರನ್ನು ಸನ್ಮಾನಿಸಲಾಗುವುದು. ಪ್ರೊ. ಕವಿತಾ ಕಾಶಪ್ಪನವರಿಂದ ಹಾಸ್ಯ ಕಾರ್ಯಕ್ರಮವಿದೆ ಎಂದು ಅಕ್ಕನ ಬಳಗದ ಕಾರ್ಯದರ್ಶಿ ಮೀನಾಕ್ಷಿ ಸಜ್ಜನರ ತಿಳಿಸಿದ್ದಾರೆ.
13ರಂದು ಪ್ರತಿಭಟನೆ
ಮುಂಡರಗಿ:  ಪಡಿತರ ಚೀಟಿಗಾಗಿ ಅರ್ಜಿಗಳನ್ನು ಸ್ವೀಕರಿಸಿದ್ದು, ಒಂದು ವರ್ಷ ಕಳೆದರೂ ಇದುವರೆಗೂ ಪಡಿತರ ಚೀಟಿಗಳು ಬರುತ್ತಿಲ್ಲ. ರು. 500, ರು. 1000 ನೀಡಿದವರಿಗೆ ಅಧಿಕಾರಿಗಳು ಪಡಿತರ ಚೀಟಿ ವಿತರಿಸುತ್ತಿದ್ದಾರೆ. ಆದ್ದರಿಂದ ಜನವರಿ 13 ರೊಳಗಾಗಿ ಅರ್ಜಿನೀಡಿದ ಎಲ್ಲ ಫಲಾನುಭವಿಗಳಿಗೂ ಪಡಿತರ ಚೀಟಿ ವಿತರಿಸಬೇಕು. ನೀಡದಿದ್ದಲ್ಲಿ ಜ. 13ರಂದು ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಾನಂದ ಬಾರಕೇರ ಹೇಳಿದರು. ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಡಿತರ ಚೀಟಿ ಕೇವಲ ಪಡಿತರ ಆಹಾರಧಾನ್ಯಗಳಿಗಷ್ಟೇ ಅಲ್ಲದೇ ಶಾಲಾ ವಿದ್ಯಾರ್ಥಿಗಳಿಗೆ, ಗರ್ಭಿಣಿಯರಿಗೆ, ಭಾಗ್ಯಲಕ್ಷ್ಮಿ ಫಲಾನುಭವಿ ಮಕ್ಕಳಿಗೆ ಸಾಕಷ್ಟು ಅವಶ್ಯವಾಗಿದ್ದು, ಸರ್ಕಾರ ಈ ಕೂಡಲೇ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮುಂಡರಗಿ ಉದ್ಯಾನ ಅಭಿವೃದ್ಧಿಗೆ ಒತ್ತಾಯ
ಗದಗ: ಜಿಲ್ಲೆಯ ಮುಂಡರಗಿ ಪಟ್ಟಣವು ವಾಣಿಜ್ಯೋದ್ಯಮದಲ್ಲಿ ಪ್ರಗತಿ ಕಂಡುಕೊಳ್ಳುತ್ತಿರುವ ಪಟ್ಟಣವಾಗಿದೆ. ಆದರೆ,  ಇಲ್ಲಿ ಸ್ಥಾಪಿತವಾಗಿರುವ ಕೆಲವು ಸಾರ್ವಜನಿಕರ ಆಸ್ತಿ ಸೌಲಭ್ಯಗಳಿಲ್ಲದೆ ಹಾಳು ಹಾಳಾಗುತ್ತಿದ್ದು, ಇಲ್ಲಿ ಸ್ಥಾಪಿಸಲಾಗಿರುವ ಉದ್ಯಾನ ಸೂಕ್ತ ಸೌಲಭ್ಯವಿಲ್ಲದೆ ಹಾಳು ಕೊಂಪೆಯಾಗುತ್ತಿವೆ.
ಮುಂಡರಗಿ ಪಟ್ಟಣದ ಪುರಸಭೆ ಪಕ್ಕದಲ್ಲಿ ವ್ಯಾಪಾರಸ್ಥರ ಮತ್ತು ಸಾರ್ವಜನಿಕರ, ಶಾಲಾ ಮಕ್ಕಳ ಹಾಗೂ ಪರಿಸರವಾದಿಗಳಿಗಾಗಿ ಎರಡು ದಶಕಗಳ ಹಿಂದೆ ಪುರಸಭೆಯಿಂದ ಸಾಕಷ್ಟು ಹಣ ಖರ್ಚು ಮಾಡಿ ಉದ್ಯಾನ ನಿರ್ಮಿಸಿತ್ತು. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಉದ್ಯಾನ ಪುರಸಭೆ ನಿರ್ಲಕ್ಷ್ಯದಿಂದ ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಒಣಗಿದ್ದು, ಇಂದು ಹಂದಿ, ನಾಯಿ ಹಾಗೂ ಬಿಡಾಡಿ ದನಕರುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದ ಈ ಉದ್ಯಾನಕ್ಕೆ ಪರಿಸರವಾದಿಗಳು ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾಲಿಡದಂತಾಗಿದೆ. ಈ ಹಿಂದೆ ಮಕ್ಕಳು, ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಸುಂದರ ಉದ್ಯಾನದ ಎದುರಿನಲ್ಲಿರುವ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ನಿತ್ಯ ಇಲ್ಲಿಯೇ ಕುಳಿತು ಊಟೋಪಹಾರ ಮಾಡುತ್ತಿದ್ದರು. ಇದೀಗ ಉದ್ಯಾನದಲ್ಲಿ ಕುಳಿತುಕೊಳ್ಳಲಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.   
ಇನ್ನಾದರೂ ಪುರಸಭೆಯವರು ಉದ್ಯಾನ ಅಭಿವೃದ್ಧಿಗೆ ಮುಂದಾಗಬೇಕೆಂದು ಸಂಸ್ಥೆ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಹಾಗೂ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement