ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳಿಗೆ ಲಸಿಕೆ ಅವಶ್ಯ: ಕೋಳಿವಾಡ

Lingaraj Badiger
Updated On : 7 Jan 2014, 12:18 pm

ಗದಗ: ಮಕ್ಕಳಿಗೆ ಸಕಾಲಕ್ಕೆ ಲಸಿಕೆ ಹಾಕಿಸುವಂತೆ ಹೊಳೆಆಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಪ್ತಸಮಾಲೋಚಕ ಅಶೋಕ ಕೋಳಿವಾಡ ಹೇಳಿದರು.
ಅವರು ಈಚೆಗೆ ಸಮೀಪದ ಸೋಮನಕಟ್ಟಿ ಗ್ರಾಮದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ಎಚ್‌ಐವಿ, ಏಡ್ಸ್, ಕುರಿತು ಮಾಹಿತಿ, ನಿಯಂತ್ರಣ ಕ್ರಮಗಳು ಹಾಗೂ ರೋಗಪೀಡಿತ ಗರ್ಭಿಣಿ ತಾಯಿಯಿಂದ ಮಗುವಿನ ಸಂರಕ್ಷಣೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಶಿಕ್ಷಣಾಧಿಕಾರಿ ರೇಖಾ ಬಾಡಗಿ (ಗಿಡ್ನಂದಿ) ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹುಲ್ಲೂರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ.ಜಿ. ಬರಡ್ಡಿ ಮಾತನಾಡಿ, ಏಡ್ಸ್ ರೋಗಿಗಳನ್ನು ಸಾಮಾನ್ಯರಂತೆ ಕಾಣಬೇಕು. ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆಯಿಂದ ಇನ್ನೂ ಹೆಚ್ಚಿನ ಕಾಲ ಬದುಕಲು ಸಾಧ್ಯವಿದ್ದು, ಅಗತ್ಯ ಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದರು.
ಶಾಂತಾ ಅಂಗಡಿ, ಪಾರ್ವತಿ ಬರಡ್ಡಿ, ಎಸ್.ಪಿ. ಬೂಗಾರ, ಗ್ರಾಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement