ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರು. 15 ಲಕ್ಷ ವೆಚ್ಚದಲ್ಲಿ ಒಳಕ್ರೀಡಾಂಗಣ

Lingaraj Badiger
Updated On : 7 Jan 2014, 12:23 pm

ಕನ್ನಡಪ್ರಭ ವಾರ್ತೆ, ರೋಣ, ಜ. 6
ಕ್ರೀಡೆಗೆ ಉತ್ತೇಜನ ಮತ್ತು ಕ್ರೀಡಾಪಟುಗಳಿಗೆ ಅನೂಕೂಲವಾಗುವ ದಿಸೆಯಲ್ಲಿ ಪಟ್ಟಣದಲ್ಲಿ ರು. 15 ಲಕ್ಷ ವೆಚ್ಚದಲ್ಲಿ ಒಂದು ಸುಸಜ್ಜಿತವಾದ ಒಳ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ಜಿಪಂ, ಯುವಜನ ಸೇವಾ ಕ್ರೀಡಾ ಇಲಾಖೆ, ತಾಪಂ, ಪುರಸಭೆ ರೋಣ ಇವರುಗಳ ಸಂಯುಕ್ತಾಶ್ರದಲ್ಲಿ 2012-13ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಎಸ್‌ಟಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕ್ರೀಡಾ ಅನ್ವೇಷಣೆ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಜಿಮ್ ಸೇರಿದಂತೆ ಒಳಾಂಗಣ ಕ್ರೀಡೆಗೆ ಪಟ್ಟಣದಲ್ಲಿ ಒಂದು ವ್ಯವಸ್ಥಿತವಾದ ಕ್ರೀಡಾಂಗಣ ಇಲ್ಲದಿರುವುದನ್ನು ಮನಗಂಡು ಒಳಕ್ರೀಡಾಂಗಣ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಶಾಲಾ ಹಂತದಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಇರುವವರು ಕ್ರೀಡೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸರ್ಕಾರ ಕ್ರೀಡಾ ಅನ್ವೇಷನಾ ತರಬೇತಿ ಶಿಬಿರಗಳನ್ನು ನಡೆಸುತ್ತಾ ಬಂದಿದೆ ಎಂದರು.
ತಾಲೂಕು ಯುವಜನ ಸೇವಾ ಕ್ರೀಡಾ ಸಹಾಯಕ ಅಧಿಕಾರಿ ಜಗದೀಶ ಬೂದಿಹಾಳ ಮಾತನಾಡಿ, ಮಕ್ಕಳಲ್ಲಿನ ಮೂಲ ಕೌಶಲ್ಯಗಳನ್ನು ಹೊರಹಾಕಲು, ಆಟಗಳ ಮೂಲಕ ಕೌಶಲ್ಯಗಳ ಅಭಿವೃದ್ಧಿ ಪಡಿಸುವುದೇ ಈ ಶಿಬಿರದ ಉದ್ದೇಶವಾಗಿದೆ.
ಈ ಶಿಬಿರವು ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಏರ್ಪಡಿಸಲಾಗಿದೆ. ಇಲ್ಲಿ 6 ರಿಂದ 10ನೇ ತರಗತಿಯ 50 ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲಾಗುವುದು.
ತರಬೇತಿಯು ಬೆಳಗ್ಗೆ 6 ರಿಂದ 9.30 ವರೆಗೆ ಮತ್ತು 5.30 ರಿಂದ 8 ಗಂಟೆವರೆಗೆ ತರಬೇತಿ ನೀಡಲಾಗುವುದು. ಶಿಬಿರವು ಜ. 6 ರಿಂದ 10 ದಿನಗಳ ವರೆಗೆ ನಡೆಯಲಿದೆ. ಶಿಬಿರಾರ್ಥಿಗಳಿಗೆ ಬೆಳಗ್ಗೆ ಉಪಾಹಾರ, ಸಾಯಂಕಾಲ ಮೊಟ್ಟೆ, ಬಾಳೆಹಣ್ಣು, ಬೆಳೆಕಾಳು ಸೇರಿದಂತೆ ಪೌಷ್ಟಿಕಾಂಶಯುಳ್ಳ ಪದಾರ್ಥಗಳನ್ನು ಕೊಡಲಾಗುವುದು ಎಂದರು.
ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷೆ ಶೌಲಜಾ ಯರಗೇರಿ, ಸದಸ್ಯೆ ಗಾಯತ್ತಿ ನಾಗನೂರ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಸದಸ್ಯ ಶಫೀಕ ಮೂಗನೂರ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಅಮೃತಗೌಡ ಗೌಡರ, ಶರಣಗೌಡ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಎಲ್.ವಿ. ಮೇಸ್ತಾ, ಡಾ. ಶಶಿಧರ ಹಟ್ಟಿ, ಎಸ್.ವೈ. ಯಡಳ್ಳಿ. ತರಬೇತಿದಾರ ರಾಜೇಶ ಪತ್ತಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಹೇಶ ಕುರಿ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement