ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರತಿಯೊಬ್ಬರೂ ರಕ್ತದಾನ ಮಾಡಿ

Lingaraj Badiger
Updated On : 8 Jan 2014, 1:29 am

ಗಜೇಂದ್ರಗಡ: ರಕ್ತದಾನ ಮಹಾದಾನ. ರಕ್ತದಾನದಿಂದ ಮತ್ತೊಂದು ಜೀವ ಉಳಿಸಿದ ತೃಪ್ತಿ ಲಭಿಸುತ್ತದೆ. ಈ ಹಿನ್ನೆಲೆಯಿಂದ ದೇಹದಲ್ಲಿ ಹರಿಯುವ ರಕ್ತ ಗುಂಪು ಅರಿತು ರಕ್ತದಾನ ಮಾಡಲು ಮುಂದಾಗಬೇಕು ಎಂದು ಪ್ರಯೋಗಾಲಯ ತಜ್ಞ ಡಾ. ಶೇಖರ ಅಂಗಡಿ ಹೇಳಿದರು.
ಈಚೆಗೆ ಸ್ಥಳೀಯ ಜ. ತೋಂಟದಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಿ ಸಂಸ್ಥೆಯಿಂದ ನಡೆದ ರಕ್ತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಪಘಾತ ಸಮಯದಲ್ಲಿ ರೋಗಿಗಳಿಗೆ, ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ ಜಾಸ್ತಿಯಾಗಿರುತ್ತದೆ. ಆಗ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಇಂತಹ ತುರ್ತು ಸಂದರ್ಭದಲ್ಲಿ ರಕ್ತ ತಪಾಸಣೆ ಮಾಡಿ ಚಿಕಿತ್ಸೆ ಕೊಡುವದರಲ್ಲಿ ಸಮಯ ವ್ಯರ್ಥವಾಗುತ್ತದೆ. ಚಿಕತ್ಸೆ ಫಲಕಾರಿಯಾಗದೇ ಜೀವ ಕಳೆದುಕೊಳ್ಳುವ ಸಂಭವ ಹೆಚ್ಚು. ಆದ್ದರಿಂದ ಎಲ್ಲರೂ ರಕ್ತ ತಪಾಸಣೆ ಮಾಡಿಸಿಕೊಂಡು ತಮ್ಮ ರಕ್ತದ ಗುಂಪು ಯಾವುದು ಎಂಬುದನ್ನು ತಿಳಿದಿರಬೇಕು. ರಕ್ತದಾನದಲ್ಲಿ ಮೊದಲ ಸ್ಥಾನ ತಾಯಿಗೆ ಸಲ್ಲುತ್ತದೆ. ಕರಳು ಕುಡಿಗೆ ರಕ್ತ ಕೊಡುವ ಮೊದಲ ದಾನಿ ತಾಯಿ ಆಗಿದ್ದಾಳೆ. ಹಾಗಾಗಿ ಹೆರಿಗೆ ಸಮಯದಲ್ಲಿ ರಕ್ತಸ್ರಾವವಾಗುವಾಗ ತಾಯಿಗೆ ರಕ್ತದ ಅವಶ್ಯಕತೆ ಇರುತ್ತದೆ. ತುರ್ತು ರಕ್ತ ಅವಶ್ಯ ಕೊರತೆ ನೀಗಿಸಲು ಬೇಕಾದ ಗುಂಪಿನ ರಕ್ತ ಹುಡುಕಬೇಕಾಗುತ್ತದೆ. ತಮ್ಮ ಗುಂಪು ಯಾವುದು ಎಂದು ತಿಳಿದಿದ್ದರೆ ಹೆಚ್ಚು ಅನುಕೂಲವಾಗಲಿದೆ ಎಂದರು.
ರೋಟರಿ ಅಧ್ಯಕ್ಷ ಡಾ. ಟಿ.ಎಚ್. ಶಂಕರ, ಕಾಲೇಜಿನ ಪ್ರಾಚಾರ್ಯ ವಿಲ್ಸನ್ ಫರ್ನಾಂಡಿಸ್ ಪ್ರಾಸ್ತಾವಿಕ ಮಾತನಾಡಿದರು. ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮನಿ, ಮೋಹನ ಜಿರೆ, ಗಿರೀಶ ಕುಲಕರ್ಣಿ, ನ್ಯಾಯವಾದಿ ಆರ್.ಎಂ. ರಾಯಬಾಗಿ, ಜೆಟಿ ಶಾಲೆ ಪ್ರಾಚಾರ್ಯರಾದ ಸಪ್ನಾ ಬನ್ನಿಕೊಪ್ಪ, ಬಸವರಾಜ ಗೆದಗೇರಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement