ಅದ್ಧೂರಿ ಪೈಗಂಬರ್ ಜಯಂತಿ ಆಚರಣೆಗೆ ನಿರ್ಧಾರ
ಗದಗ: ಈಚೆಗೆ ನಗರದ ಈದ್ಮಿಲಾದ್ ಕಮಿಟಿಯ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಜ. 14ರಂದು ಹಜರತ್ ಮಹ್ಮದ್ ಪೈಗಂಬರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಂತರ ಗದಗ-ಬೆಟಗೇರಿ ಈದ್ ಮಿಲಾದ್ ಕಮಿಟಿಯ ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಕ್ಬರಸಾಬ ಬಬರ್ಚಿ, ಉಪಾಧ್ಯಕ್ಷರಾಗಿ ರಿಜವಾನ ಪಾಚಾಪೂರ, ಕಾರ್ಯದರ್ಶಿಯಾಗಿ ಅಬೂಬಕರ ಅಣ್ಣಿಗೇರಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಎಂ.ಐ. ನವಲೂರ, ಮಖಬೂಲಸಾಬ ಶಿರಹಟ್ಟಿ, ನಿಸ್ಸಾರ್ಅಹ್ಮದ್ ಖಾಜಿ, ರಾಜಾ ಪಠಾಣ, ಉಮರಫಾರೂಕ ಹುಬ್ಬಳ್ಳಿ, ಖುರ್ಷಿದಅಹ್ಮದ ಢಾಲಾಯತ, ರಫೀಕ್ ಅಬ್ಬಿಗೇರಿ, ರಬ್ಬಾನಿ ಅಣ್ಣಿಗೇರಿ, ಕಾಸಿಂ ಕಿಲ್ಲೇದಾರ, ಜಿ.ಎಂ. ದಂಡಿನ, ಖಾದರ ಬನ್ನೂರ, ಸಲೀಂ ಕತ್ತಿ, ವಾಸಿಮ ಬೆಂಗಳೂರ, ರಫೀಕ್ ಇರಕಲ್, ಶಮೀರ ಜಮಾದಾರ, ಅನ್ವರ ಶಿರಹಟ್ಟಿ, ನೂರಬಾಷಾ ಎಚ್.ಎಂ, ಯುನೂಸ್ ಜಮಾದಾರ, ಅಬ್ಬಾಸ ಲಾಲಕೋಟಿ, ಜಾವೇದ ಬಬರ್ಚಿ, ಮುನ್ನಾ ಕನವಳ್ಳಿ, ಹಸೇಸಾಬ ಕತ್ತಿ, ಮುನ್ನಾ ರೇಶ್ಮೆ ಮುಂತಾದವರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.