ಇಂದು ಕಲಿಕೋತ್ಸವ ಕಾರ್ಯಕ್ರಮ
ಗದಗ: ಜಿಲ್ಲಾ ಪಂಚಾಯ್ತಿ ಗದಗ, ತಾಲೂಕು ಪಂಚಾಯ್ತಿ ಮುಂಡರಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ವ ಶಿಕ್ಷಣ ಅಭಿಯಾನ ಮುಂಡರಗಿ ಆಶ್ರಯದಲ್ಲಿ ಜ. 9ರಂದು ಮುಂಡರಗಿ ಪಟ್ಟಣದ ಜೆ.ಟಿ. ಕೋಟೆ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಮುಂಡರಗಿ ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಜರುಗಲಿದೆ.
ರೋಣ ಶಾಸಕ ಜಿ.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಪಂ ಅಧ್ಯಕ್ಷ ಕಮಲವ್ವ ಸಜ್ಜನರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಶಿಕ್ಷಣ ಸ್ಥಾಯಿ ಸಮೀತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ತಾಪಂ ಅಧ್ಯಕ್ಷ ತಾರೂಬಾಯಿ ಚಹ್ವಾನ್, ಉಪಾಧ್ಯಕ್ಷರಾದ ಅಕ್ಕಮಹಾದೇವಿ ಹಾರೋಗೇರಿ, ಜಿಪಂ ಸದಸ್ಯರಾದ ಬೀರಪ್ಪ ಬಂಡಿ, ಹೇಮಗಿರೀಶ ಹಾವಿನಾಳ, ಕಸ್ತೂರೆವ್ವ ಪಾಟೀಲ, ಡಿಡಿಪಿಐ ಬಿ.ವಿ. ರಾಜೇಂದ್ರಪ್ರಸಾದ್, ಡಯಟ್ ಪ್ರಾಚಾರ್ಯ ಬಿ.ಎಸ್. ರಘುವೀರ, ಭುವನೇಶ್ವರಿ ವಿದ್ಯಾ ಸಮಿತಿ ಅಧ್ಯಕ್ಷ ಡಿ.ಜಿ. ಹಿರೇಮಠ ಆಗಮಿಸಲಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ರಡ್ಡೇರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.