ಬೆಲೆ ಏರಿಕೆ: ಬಿಜೆಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಜ. 8
ಅಡುಗೆ ಅನಿಲ, ಅಟೋಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ ಕೇಂದ್ರ ಯುಪಿಎ ಸರ್ಕಾರದ ನೀತಿ ವಿರುದ್ಧ ಬುಧವಾರ ಮುಂಡರಗಿ ತಾಲೂಕು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪುರಸಭೆ ಉದ್ಯಾನದಿಂದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಾಗಿದ ಪ್ರತಿಭಟನಾ ಮೆರವಣಿಗೆ ಕೊಪ್ಪಳ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿತು. ಅಲ್ಲಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಶಿರಹಟ್ಟಿ ವಿಧಾನಸಭೆ ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಮನಮೋಹನ್ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರ ಬದುಕು ತತ್ತರಿಸುವಂತೆ ಮಾಡಿದೆ.
ಈ ಕೂಡಲೇ ಅಡುಗೆ ಅನಿಲ ಮತ್ತು ಪೆಟ್ರೋಲ್, ಡೀಸೆಲ್ ದರ ಇಳಿಸಬೇಕು. ರಾಜ್ಯ ಸರ್ಕಾರ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು ವಿಫಲವಾಗಿದೆ ಎಂದರು.
ಹಮ್ಮಿಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಯುಪಿಎ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಹೀಗಾಗಿ ಬರುವ ದಿನಗಳಲ್ಲಿ ಬಿಜೆಪಿ ಪಕ್ಷ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತದೆ ಎಂದರು.
ಪ್ರತಿಭಟನೆಯಲ್ಲಿ ಬಿ.ಎಸ್. ಸಸಿಮಠ, ದೇವಪ್ಪ ಕಂಬಳಿ, ರಜನಿಕಾಂತ ದೇಸಾಯಿ, ದೇವಪ್ಪ ಇಟಗಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಶ್ರೀಕಾಂತಗೌಡ ಪಾಟೀಲ, ರಾಜಣ್ಣ ಹಾವೇರಿ, ಮಂಜುನಾಥ ಇಟಗಿ, ಮೋಹನ ದೇಸಾಯಿ, ಅರ್ಜುನ ಕರಡಿಕೊಳ್ಳ, ಫಕ್ಕೀರರೆಡ್ಡಿ ನೀರಲಗಿ, ಮಂಜುನಾಥ ಕಾಗನೂರ, ಶಂಕರಗೌಡ ಜಾಯನಗೌಡರ, ಸಿ.ಎಸ್. ಕಲ್ಮಠ, ಕೊಪಣ್ಣ ಕೊಪ್ಪಣ್ಣವ, ಶಂಕರಗೌಡ ಪಾಟೀಲ, ಸುರೇಶ ಮಾಳೆಕೊಪ್ಪ, ಪ್ರಭು ಅಬ್ಬೀಗೇರಿ, ಪರುಶುರಾಮ ಕರಡಿಕೊಳ್ಳ ಇತರರು ಪಾಲ್ಗೊಂಡಿದ್ದರು. ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ರಮೇಶ ಬಾಲೆಹೊಸೂರ ಮನವಿ ಸ್ವೀಕರಿಸಿದರು.
ಪ್ರತ್ಯೇಕ ಮನವಿ: ಇದೇ ಸಂದರ್ಭ ಸಮರ್ಪಕ 3 ಪೇಸ್ ವಿದ್ಯುತ್ ಪೂರೈಸಬೇಕು ಎಂದು ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್ ಹಾಗೂ ಹೆಸ್ಕಾಂ ಕಚೇರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ನಿರಂತರ 18 ತಾಸು ವಿದ್ಯುತ್ ಪೂರೈಸಬೇಕು. ಹಗಲು 10 ಮತ್ತು ರಾತ್ರಿ 8 ತಾಸು 3 ಪೇಸ್ ವಿದ್ಯುತ್ ಕೊಡದಿದ್ದರೆ ಜ. 16ರಂದು ತಾಲೂಕಿನ ರೈತರು ಒಟ್ಟಾಗಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭ ಮೈಲಾರಪ್ಪ ಉದಂಡಿ, ಬಸವರಾಜ ವಾಲಿಕಾರ, ಎಸ್.ವಿ. ಕಾಶೆಟ್ಟಿ, ಎಂ. ಬಾವಾಜಿ, ಹನುಮಪ್ಪ ಗೌಡ್ರ, ಕೆ.ವಿ. ಹಂಚಿನಾಳ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಶಂಕರಗೌಡ ಪಾಟೀಲ, ರಜನಿಕಾಂತ ದೇಸಾಯಿ ನೂರಾರು ರೈತರು ಪಾಲ್ಗೊಂಡಿದ್ದರು.