ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆಯಿಂದ ಡ್ಯಾನ್ಸ್ ಗದಗ ಡ್ಯಾನ್ಸ್ ಆಡಿಶನ್

Mainashree
Updated On : 10 Jan 2014, 11:00 am

ಕನ್ನಡಪ್ರಭ ವಾರ್ತೆ, ಗದಗ, ಜ. 9
ಜಿಲ್ಲೆಯಲ್ಲಿರುವ ಸೂಕ್ತ ಪ್ರತಿಭೆಗಳನ್ನು ಹೊರಹಾಕುವ ಉದ್ದೇಶದಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಜ. 11ರಿಂದ ನಗರದಲ್ಲಿ ಗ್ಲೋಬಲ್ ಪ್ಲೇ ಅಕಾಡೆಮಿ ಮತ್ತು ಬ್ಲಾಕ್ ಶಡೆಲ್ಸ್‌ನ ನೇತೃತ್ವದಲ್ಲಿ ಡ್ಯಾನ್ಸ್ ಗದಗ ಡ್ಯಾನ್ಸ್ ಆಡಿಶನ್ ಆರಂಭಿಸಲಾಗುವುದು ಎಂದು ಗ್ಲೋಬಲ್ ಪ್ಲೇ ಅಕಾಡೆಮಿಯ ಫಯಾಜ್ ಹೇಳಿದರು.
ಅವರು ಗುರುವಾರ ನಗರದ ಎ.ಎಸ್.ಎಸ್. ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಈ ಬೃಹತ್ ಡ್ಯಾನ್ಸ್ ಆಡಿಶನ್ ಹಮ್ಮಿಕೊಳ್ಳಲಾಗಿದ್ದು, ಈ ಡ್ಯಾನ್ಸ್‌ನಲ್ಲಿ ಎಲ್ಲ ಶಾಲಾ-ಕಾಲೇಜುಗಳ ಹಾಗೂ ಕಾಲೇಜೇತರ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಈ ಡ್ಯಾನ್ಸ್ ಆಡಿಶನ್ ಜ. 11ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಜರುಗಲಿದ್ದು, ಜ. 11, 18 ಮತ್ತು 25ರಂದು ನಗರದ ಎ.ಎಸ್.ಎಸ್. ಕಾಲೇಜಿನಲ್ಲಿ ಹಾಗೂ ಜ. 12 ಮತ್ತು 19ರಂದು ಹುಡ್ಕೋ ನಗರದಲ್ಲಿರುವ ಕೆ.ಎಚ್.ಬಿ. ಮಳಿಗೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಸುಮಾರು ರು. 1 ಲಕ್ಷ ವಿವಿಧ ರೀತಿಯ ಬಹುಮಾನಗಳನ್ನು ನೀಡುವ ಗುರಿ ಹೊಂದಲಾಗಿದೆ. ಜ್ಯೂನಿಯರ್ ವಿದ್ಯಾರ್ಥಿಗಳಿಗೆ ರು. 200 ಹಾಗೂ ಸೀನಿಯರ್ ವಿದ್ಯಾರ್ಥಿಗಳಿಗೆ ರು. 250 ಗಳ ಪ್ರವೇಶಾತಿ ಶುಲ್ಕ ನಿಗದಿಪಡಿಸಲಾಗಿದೆ. ಕೊನೆಯಲ್ಲಿ ಜರುಗುವ ಗ್ರ್ಯಾಂಡ್ ಫಿನಾಲೆಗೆ ಕನ್ನಡ ಮತ್ತು ತೆಲುಗಿನ ಖ್ಯಾತ ನೃತ್ಯ ನಿರ್ದೇಶಕರನ್ನು ಆಹ್ವಾನಿಸಿ ವಿಜೇತರನ್ನು ಆಯ್ಕೆಗೊಳಿಸಲಾಗುವುದು.
ಆಯ್ಕೆಗೊಳಿಸಿದ ವಿದ್ಯಾರ್ಥಿಗಳನ್ನು ಮುಂಬರುವ ದಿನಗಳಲ್ಲಿ 2014ರಲ್ಲಿ ಜರುಗುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಆಡಿಶನ್‌ಗೆ ತರಬೇತಿಗೊಳಿಸಲಾಗುವುದು ಎಂದರು.  
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎ.ಎಸ್.ಎಸ್. ಕಾಲೇಜಿನ ಪ್ರಾಚಾರ್ಯ ಎಂ.ಎಲ್. ಗುಳೇದಗುಡ್ಡ ಮಾತನಾಡಿ, ಜಿಲ್ಲೆಯಲ್ಲಿರುವ ನೃತ್ಯ ಪ್ರತಿಭೆಗಳನ್ನು ಹೊರತರಲು ಈ ಆಡಿಶನ್ ಸಹಕಾರಿಯಾಗಿದ್ದು, ಈ ಆಡಿಶನ್‌ನಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಕೌಶಲ್ಯ ತೋರಿಸುವಂತೆ ಕೋರಿದರು. ಸುದ್ದಿಗೋಷ್ಠಿಯಲ್ಲಿ ಗ್ಲೋಬಲ್ ಪ್ಲೇ ಅಕಾಡೆಮಿಯ ಗೋಪಿ, ಬ್ಲಾಕ್ ಶಡೆಲ್ಸ್‌ನ ವೆಂಕಟೇಶ, ಸುಮಂತ, ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ, ವಿಜಯ ಹಿರೇಮಠ, ಶಶಿಧರ ದಿಂಡೂರ, ಸುನಿತಾ ಪಾಟೀಲ, ಸಿ.ಎಂ. ಪಾಟೀಲ, ಐ.ವಿ. ಬೆಳಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement