ಸರ್ಕಾರಿ ಸೌಲಭ್ಯ ಎಲ್ಲರಿಗೂ ಸಿಗಲಿ: ಜಿಎಸ್ಪಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 9
ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿದಾಗ ಸರ್ಕಾರದ ಯೋಜನೆಗಳು ಸಾರ್ಥಕಗೊಳ್ಳುತ್ತವೆ. ಈ ನಿಟ್ಟಿನಲ್ಲಿ ರೋಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧನಾಗಿ ಶ್ರಮಿಸುವೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ಕುಂಟೋಜಿ ಗ್ರಾಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಂಕ್ರೀಟ್ ರಸ್ತೆ, ಶಾಲಾ ಕೊಠಡಿ, ಕ್ರೀಡಾಂಗಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಚಳಗೇರಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಮಾಳೋತ್ತರ, ತಾಪಂ ಸದಸ್ಯೆ ಕವಿತಾ ಡೊಣ್ಣೆಗುಡ್ಡ, ಮಾಜಿ ಜಿಪಂ ಅಧ್ಯಕ್ಷ ಎನ್.ಕೆ. ಬೇವಿನಮರದ, ಅಶೋಕ ಬಾಗಮಾರ, ವೀರಣ್ಣ ಸೊನ್ನದ, ವಿ.ಆರ್. ಗುಡಿಸಾಗರ, ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಇಇಒ ಎಸ್.ಎಂ. ಪಿಡಶೆಟ್ಟಿ ಭಾಗವಹಿಸಿದ್ದರು.
ಮಾಜಿ ಗ್ರಾಪಂ ಅಧ್ಯಕ್ಷ ಮುದಿಯಪ್ಪ ಕರಡಿ, ಯುಸೂಫ್ ಇಟಗಿ, ಕಳಕಪ್ಪ ಡೊಳ್ಳಿನ, ಹನುಮವ್ವ ತಳವಾರ, ಅಕ್ಕವ್ವ ಕರಬಾಶೆಟ್ಟಿ, ದ್ರಾಕ್ಷಾಯಿಣಿ ಡೊಳ್ಳಿನ, ಭೀಮನಗೌಡ ಡೊಳ್ಳಿನ, ಮುತ್ತಣ್ಣ ಕೊಪ್ಪಳ, ಕಳಕಪ್ಪ ಜೂಲಗುಡ್ಡ, ಬಸಣ್ಣ ಕರಡಿ, ಶರಣಯ್ಯ ಕುಕನೂರಮಠ, ತೋಟಯ್ಯ ಹಿರೇಮಠ, ಹನುಮಪ್ಪ ಭಜಂತ್ರಿ, ವಿ.ಎಸ್. ಕುಷ್ಟಗಿ, ದಾವಲಸಾಬ ನದಾಫ್, ಬಸಪ್ಪ ಬಡಿಗೇರ ಉಪಸ್ಥಿತರಿದ್ದರು.