ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿ
ಕನ್ನಡಪ್ರಭ ವಾರ್ತೆ, ರೋಣ, ಜ, 10
ಶೈಕ್ಷಣಿಕ ಅಭಿವೃದ್ದಿ ಮತ್ತು ಮಕ್ಕಳ ಕಲಿಕೆ ಗಟ್ಟಿಗೊಳ್ಳಬೇಕಾದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅತ್ಯಗತ್ಯವಾಗಿದ್ದು, ಆ ದಿಶೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಗುರವಾರ ಪಟ್ಟಣದ ಎಸ್.ಆರ್. ಪಾಟೀಲ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಜರುಗಿದ ಬ್ಲಾಕ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸುಂಡಿ ಮಾತನಾಡಿ, ಕಲಿಕೋತ್ಸವ ಕಾರ್ಯಕ್ರಮವು ಗ್ರಾಮ ಮಟ್ಟದಿಂದ ತಾಲೂಕು, ಜಿಲ್ಲೆ, ರಾಜ್ಯಮಟ್ಟದವರೆಗೂ ನಡೆಸಲಾಗುತ್ತದೆ. ವಲಯ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಲಾಕ್ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಮಕ್ಕಳಿಗೆ ಪತ್ರ ಲೇಖನ, ಸಾಮಾಜಿಕ ನಾಟಕ, ಪದಬರಹ, ವೈಯಕ್ತಿಕ ಮತ್ತು ಸಾಮೂಹಿಕ ನೃತ್ಯ, ಹಾಡುಗಳ ಸ್ಪರ್ಧೆ ನಡೆಸಲಾಗುತ್ತದೆ ಎಂದರು.
ಪುರಸಭೆ ಅಧ್ಯಕ್ಷ ಮುತ್ತಣ್ಣ, ಜಿಪಂ ಉಪಾಧ್ಯಕ್ಷ ರಮೇಸ ಮುಂದಿನಮನಿ, ತಾಪಂ ಉಪಾಧ್ಯಕ್ಷ ಶೈಲಜಾ ಯರಗೇರಿ, ಮಂಜುನಾಥ ಹಾಳಕೇರಿ, ವಿ.ಆರ್. ಗುಡಿಸಾಗರ, ವೈ.ಡಿ. ಗಾಣಿಗೇರ, ವಿ.ಬಿ. ಸೋಮನಕಟ್ಟಿ, ವೈ.ಡಿ. ತಳವಾರ, ಪಿ.ಎಚ್. ಕಡಿವಾಲ ಇದ್ದರು. ಎಸ್.ವೈ. ಯಡಳ್ಳಿ ಸ್ವಾಗತಿಸಿದರು. ಚಕ್ರಸಾಲಿ ನಿರೂಪಿಸಿದರು. ಜಯಶ್ರೀ ನೀಲಗಾರ ವಂದಿಸಿದರು.