ಗ್ರಾಮೀಣ ಪ್ರದೇಶಗಳಿಗೆ ನಿರಂತರ ವಿದ್ಯುತ್ ನೀಡಲಿ
ನರಗುಂದ: ಹಿಂದಿನ ಸರ್ಕಾರದ ಅವಧಿಯಲ್ಲಿ ಗ್ರಾಮೀಣ ಭಾಗದ ಜನತಗೆ ಅನುಕೂಲವಾಗಲೆಂದು ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಲೈನ್ ಹಾಕಿ ನಿರಂತರ ಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದಿಗೂ ಯೋಜನೆ ಅನುಷ್ಠಾನವಾಗುತ್ತಿಲ್ಲ ಎಂದು ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ ಮತ್ತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಅವರು ಈಚೆಗೆ ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ತಾಪಂ ಸದಸ್ಯ ಬಿ.ಎಸ್. ಪಾಟೀಲ ಮಾತನಾಡಿ, ಹಿಂದಿನ ವರ್ಷ ಗಂಗಾಪುರ, ಹದಲಿ, ರಡ್ಡೇರನಾಗನೂರ ಗ್ರಾಮಗಳಿಗೆ ಕಾಲುವೆ ಮೂಲಕ ರೈತರ ಜಮೀನಗಳಿಗೆ ನೀರು ಪೂರೈಕೆ ಆಗಿಲ್ಲ. ಅದಕ್ಕೆ ಈ ವರ್ಷ ಬೇಗ ಉಳಿದ ಕಾಲುವೆ ಕಾಮಗಾರಿ ಮುಗಿಸಬೇಕೆಂದು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ನೀರಾವರಿ ನಿಗಮದ ಅಧಿಕಾರಿಗಳು ಸಂಬಂಧಪಟ್ಟ ವಿಭಾಗದ ಅಧಿಕಾರಿಗಳಿಗೆ ತಿಳಿಸಿ ಶೀಘ್ರವೇ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.
ಜಿಪಂ ಸದಸ್ಯ ಶಾಂತಾ ದಂಡಿನ, ತಾಪಂ ಉಪಾಧ್ಯಕ್ಷ ಗುರುದೇವಿ ಶಾನವಾಡಮಠ, ವಿ.ಎನ್. ಕೊಳ್ಳಿಯವರ, ಮಲ್ಲಪ್ಪ ಮೇಟಿ, ವಿದ್ಯಾವತಿ ಭೂಮಣ್ಣವರ, ಭೀಮವ್ವ ಶಿರಹಟ್ಟಿ, ಶಾತಂವ್ವ ಯಲಿಗಾರ, ಪಾರವ್ವ ಹಡಗಲಿ, ಗೋವಿಂದರಡ್ಡಿ ಸಿದ್ನಾಳ, ಗಂಗಾಧರ ಕಂಠಣ್ಣವರ, ಹೆಬ್ಬಳ್ಳಿವ್ವ ದೊಡಮನಿ, ನಂದಕುಮಾರ ಗುಂಡಾ, ಎಸ್.ಎ. ವಸ್ತ್ರದ, ಪ್ರದೀಪ ಭೋವಿ, ಪಿ.ಎಸ್. ಉಳ್ಳಾಗಡ್ಡಿ, ರಮೇಶ ನಾರಯಣಕರ, ಕುದರಿ ಹಾಜರಿದ್ದರು.